ದಾವಣಗೆರೆ, ಡಿ.13 – ಜಿಲ್ಲಾ ವಕೀಲರ ಸಂಘದಿಂದ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಹೆಚ್.ಎನ್. ರಾಜಶೇಖರಪ್ಪ, ಎಂ.ಬಿ. ಶಿವಾನಂದಪ್ಪ ಮತ್ತು ರಾಮಚಂದ್ರ ಕಲಾಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಶ್ರೀಪಾದ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣ್ಕುಮಾರ್ ಆರ್.ಎನ್., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ಕುಮಾರ್, ಕಾರ್ಯದರ್ಶಿ ಎಸ್. ಬಸವರಾಜ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಗಿಹಳ್ಳಿಮಠ, ಎಂ. ಚೌಡಪ್ಪ, ಸಂತೋಷ್ ಕುಮಾರ್ ಜಿ.ಜೆ., ರಾಘವೇಂದ್ರ ಎಂ., ಅಜ್ಜಯ್ಯ ಆವರಗೆರೆ, ಭಾಗ್ಯಲಕ್ಷ್ಮಿ ಆರ್., ನಾಗರಾಜ್ ಎಲ್., ನೀಲಕಂಠಯ್ಯ ಕೆ.ಎಂ., ಮಧುಸೂದನ್ ಟಿ.ಹೆಚ್. ಮತ್ತು ವಕೀಲರ ಸಂಘದ ಸದಸ್ಯರು ಹಾಜರಿದ್ದರು.