ಹರಪನಹಳ್ಳಿ, ಡಿ. 12- ಕಲಬುರ್ಗಿ ವಕೀಲರ ಸಂಘದ ಸದಸ್ಯ ಈರಣ್ಣ ಗೌಡ ಪಾಟೀಲ್ ಅವರ ಹತ್ಯೆ ಹಾಗೂ ಚಿಕ್ಕಮಗಳೂರಿನ ಕಿರಿಯ ವಕೀಲನ ಮೇಲೆ ಪೊಲೀಸ್ರಿಂದ ಜರುಗಿದ ಹಲ್ಲೆ ಖಂಡಿಸಿ ಇಲ್ಲಿನ ವಕೀಲರಿಂದ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಮತ್ತಿಹಳ್ಳಿ ಅಜ್ಜಣ್ಣ ಮಾತನಾಡಿ, ವಕೀಲ ಈರಣ್ಣ ಗೌಡ ಪಾಟೀಲ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರಿನ ಕಿರಿಯ ವಕೀಲನ ಮೇಲೆ ಪೊಲೀಸರಿಂದ ಜರುಗಿದ ಹಲ್ಲೆ ಖಂಡನೀಯ. ದುಷ್ಕರ್ಮಿಗಳಿಬ್ಬರು ಹಾಡಹಗಲಲ್ಲೇ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿದ ಎಲ್ಲಾ ಹಂತಕರನ್ನು ಬಂಧಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ
ಕೆ. ಜಗದಪ್ಪ ಮಾತನಾಡಿ, ಸರ್ಕಾರ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು. ರಾಜ್ಯ ಸರ್ಕಾರವು ಅಪರಾಧವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಮನವಿ ಓದಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶಗೌಡ, ಕಾರ್ಯದರ್ಶಿ ಕೆ. ಆನಂದ, ಜಂಟಿ ಕಾರ್ಯದರ್ಶಿ ಹೂಲೆಪ್ಪ, ಖಜಾಂಚಿ ರೇಣುಕಾ ಎಫ್. ಮೇಟಿ. ಕಾರ್ಯಕಾರಿ ಸಮಿತಿಯ ಕೇಶವ ಮೂರ್ತಿ, ಬಿ.ಕರಿಯಪ್ಪ, ಮಲ್ಲಮ್ಮ ಬಡಿಗೇರ್, ರಾಜಪ್ಪ, ಮಾರುತಿ, ವಕೀಲರಾದ ಕೆ. ಚಂದ್ರೇಗೌಡ, ಪಿ. ಜಗದೀಶಗೌಡ, ಚಿಗಟೇರಿ ವೀರಣ್ಣ, ಹಾಲೇಶ, ಎಸ್.ಎಂ. ರುದ್ರಮುನಿಸ್ವಾಮಿ, ಬಿ. ರೇವನಗೌಡ, ಆರ್. ರಾಮನಗೌಡ ಪಾಟೀಲ್, ರಾಂ ಭಟ್ಟ, ಹೆಚ್. ವೀರನಗೌಡ, ಕೆ. ಪ್ರಕಾಶ, ಬಿ. ಗೋಣಿಬಸಪ್ಪ, ವಾಸುದೇವ, ಕೆ. ಉಚ್ಚೆಂಗೆಪ್ಪ, ಬಿ. ಮಹಬೂಬ್ ಸಾಬ್, ಮೈದೂರು ಮಲ್ಲಿಕಾರ್ಜುನ, ಎಂ. ಮೃತ್ಯುಂಜಯ, ಜೆ. ಸೀಮಾ, ರಾಜಪ್ಪ, ಕೆಂದಗಳ್ಳಿ ಪ್ರಕಾಶ, ಓ. ತಿರುಪತಿ, ಡಿ. ಹನುಮಂತಪ್ಪ, ಬಾಗಳಿ ಮಂಜುನಾಥ, ಕೆ. ನಾಗರಾಜ, ಎಂ. ನಾಗೇಂದ್ರಪ್ಪ, ಸಣ್ಣ ನಿಂಗನಗೌಡ, ಮುತ್ತಿಗಿ ಮಂಜುನಾಥ, ಸೌಖ್ಯ, ಕೆ. ದ್ರಾಕ್ಷಾಯಣಮ್ಮ, ನಾಗರಾಜನಾಯ್ಕ, ಎಂ. ಸುರೇಶ, ಕೆ. ಬಸವರಾಜ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.