ದಾವಣಗೆರೆ.ಡಿ.11- ಡಾ. ಎಚ್.ಎಫ್ ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಅಪರ ಆಯುಕ್ತರ ಕಾರ್ಯಾಲಯ (ಧಾರವಾಡ) ಮತ್ತು ಜಿಲ್ಲಾ ಘಟಕ ನಗರದ ಡಾ.ಬಾಣಾಪುರಮಠ ಮಕ್ಕಳ ಕ್ಲಿನಿಕ್ ಹಾಗೂ ಈಶ್ವರಮ್ಮ ಪ್ರೌಢಶಾಲೆ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 12 ರ ಮಂಗಳವಾರ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಪುಸ್ತಕ ಪಂಚಮಿಯ 14ನೇ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 2.30ಕ್ಕೆ ಪುಸ್ತಕ ವಾಚನ ಸಹಾಯ ಯೋಜನೆಯ 21 ಶಾಲೆಗಳ ಪಲಾನುಭವಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಈಶ್ವರಮ್ಮ ಶಾಲೆಯ ಗೌರವ ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಿಡಿಪಿಐ ಜಿ.ಕೊಟ್ರೇಶ್, ಈಶ್ವರಮ್ಮ ಶಾಲೆಯ ಪ್ರಾಚಾರ್ಯ ಕೆ.ಎಸ್.ಪ್ರಭುಕುಮಾರ್, ಸಹ ಪ್ರಾಚಾರ್ಯೆ ಶಶಿರೇಖಾ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಪ್ರತಿಷ್ಠಾನದ ಸಹ ಸಂಚಾಲಕರೂ ಆಗಿರುವ ಮಕ್ಕಳ ತಜ್ಞ ಡಾ.ಸಿ.ಆರ್. ಬಾಣಾಪುರಮಠ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ವಿಶ್ರಾಂತ ಬಿಇಓ ಪ್ರಕಾಶ್ ಬೂನ್ನೂರು, ವಿ.ಸಿ.ಪುರಾಣಿಕ ಮಠ, ಪಿ.ಎಂ.ಶಿವಕುಮಾರ್, ಪ್ರಭು ಬಾಣಾಪುರಮಠ ಇದ್ದರು.