ಹೊನ್ನಾಳಿಯಲ್ಲಿ ವಿದ್ಯುತ್ ಅವಘಡ ತಡೆಗಟ್ಟಲು ವಿವಿಧ ಸ್ಪರ್ಧೆಗಳು

ಹೊನ್ನಾಳಿಯಲ್ಲಿ ವಿದ್ಯುತ್ ಅವಘಡ ತಡೆಗಟ್ಟಲು ವಿವಿಧ ಸ್ಪರ್ಧೆಗಳು

ಹೊನ್ನಾಳಿ, ಡಿ. 11- ಬೆಸ್ಕಾಂ ವತಿಯಿಂದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯುಚ್ಛಕ್ತಿ ಸುರಕ್ಷತೆಯ ಬಗ್ಗೆ ಸರ್ಕಾರಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿ ವಿದ್ಯುತ್ ಅವಘಡಗಳನ್ನು ತಡೆಗಟ್ಟಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಬೆಸ್ಕಾಂ ಎಇಇ ಜಯಪ್ಪ ತಿಳಿಸಿದರು.

ಪಟ್ಟಣದ ಬಿಇಒ ಕಚೇರಿಯಲ್ಲಿ ಬಿಇಒ ಎಸ್.ಸಿ. ನಂಜರಾಜ್ ಅವರಿಗೆ ಬೆಸ್ಕಾಂ ಇಲಾಖೆಯ ಸ್ಪರ್ಧೆಗಳ ಬಗ್ಗೆ ಮಾಹಿತಿ ಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪಟ್ಟಣದ ಗುರುಭವನದಲ್ಲಿ ನಾಡಿದ್ದು ದಿನಾಂಕ 13 ರ ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ವಿದ್ಯುತ್ ಸುರಕ್ಷತೆ ಕುರಿತಂತೆ 2 ಪುಟ ಮೀರದಂತೆ ಪ್ರಬಂಧ ರಚನೆ ಸ್ಪರ್ಧೆ ಮತ್ತು ಇದೇ ದಿನಾಂಕ 22 ರ ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಸುರಕ್ಷತೆ ಕುರಿತಂತೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 

6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರವೇ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮೊದಲನೇ ಬಹುಮಾನವಾಗಿ 2000ರೂ, ದ್ವಿತೀಯ ಬಹುಮಾನ 1000ರೂ. ಮತ್ತು ತೃತೀಯ ಬಹುಮಾನ 750 ರೂ.ಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಬಿಇಒ ಎಸ್.ಸಿ. ನಂಜರಾಜ್ ಬೆಸ್ಕಾಂ ಶಾಖಾಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.

error: Content is protected !!