ಅಕ್ಷಯ ಆಸ್ಪತ್ರೆ ಆವರಣದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ), ಅಕ್ಷಯ ಆಸ್ಪತ್ರೆ, ಐ-ದೃಷ್ಟಿ ಕಣ್ಣಿನ ಆಸ್ಪತ್ರೆ, ಬೇಬಿ ಸೈನ್ಸ್, ಎಸ್.ಎಸ್.ನಾರಾಯಣ ಹಾರ್ಟ್ ಆಸ್ಪತ್ರೆ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 67ನೇ ಮಹಾಪರಿ ನಿಬ್ಬಾಣ ದಿನದ ನಿಮಿತ್ತ ಡಾ.ಬಿ.ಆರ್. ಅಂಬೇಡ್ಕರ್ ರವರ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಆಯೋಜಿಸಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮೈಸೂರಿನ ಚಿಂತಕ ಕೆ.ಎಸ್. ಭಗವಾನ್ ಉದ್ಘಾಟಿಸುವರು. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಶ್ರೀಗಳು ಮತ್ತು ಹಿರಿಯೂರು ಕೋಡಿಹಳ್ಳಿ ಮಠದ ಷಡಕ್ಷರಮುನಿ ದೇಶೀಕೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳು : ಶಾಸಕ ಬಿ.ಪಿ. ಹರೀಶ್, ಎಸ್. ರಾಮಪ್ಪ, ಗುರುಮೂರ್ತಿ, ನಂದಿಗಾವಿ ಶ್ರೀನಿವಾಸ್, ಜಿ.ಬಿ. ವಿನಯ್ ಕುಮಾರ್, ಡಾ. ನಾಗರಾಜ ವಿ.ಟಿ., ಕುಂದುವಾಡ ಮಂಜುನಾಥ. ಅಧ್ಯಕ್ಷತೆ : ಮಹಾಂತೇಶ್ ಪಿ.ಜೆ.
December 28, 2024