ಶರಣರು ಕಂಡ ಶಿವ ಪ್ರವಚನ ಮಾಲೆಯಲ್ಲಿ ಡಾ.ಬಸವರಾಜ ರಾಜಋಷಿ
ದಾವಣಗೆರೆ, ಡಿ. 9- ತ್ರಿಮೂರ್ತಿಗಳಲ್ಲಿ ಒಬ್ಬ ನಾದ ಶಂಕರನೇ ಬೇರೆ, ಜ್ಯೋತಿ ಸ್ವರೂಪಿ ಪರಮಾತ್ಮನೇ ಬೇರೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಪ್ರತಿಪಾದಿಸಿದರು.
ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾ ಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆ ಯ 6ನೇ ದಿನವಾದ ಶನಿವಾರದ ಸಮಾ ರಂಭದಲ್ಲಿ ಅವರು ಪ್ರವಚನ ನೀಡಿದರು.
ತ್ರಿಮೂರ್ತಿ ದೇವತೆಗಳು, ದೇಹ ಧಾರಿಗಳು ಹಾಗೂ ಗೃಹಸ್ಥಿ ದೇವತೆಗಳು ಇವರೆಲ್ಲರ ಮೇಲೆ ಪರಮಾತ್ಮನಿದ್ದಾನೆ. ಆದರೆ, ನಾವೆಲ್ಲಾ ಪರಮಾತ್ಮ ಶಿವನನ್ನು ಮತ್ತು ತಪಸ್ವಿ ಶಂಕರ ನನ್ನು ಒಂದೇ ಎಂದು ತಿಳಿದಿ ದ್ದೇವೆ. ಪುರಾಣಗಳಲ್ಲೂ ಹಾಗೆಯೇ ಹೇಳಲಾಗಿದೆ. ಆದರೆ ಶಂಕರ, ಗಂಗೆ, ಗೌರಿ, ಗಣೇಶ, ಕಾರ್ತಿಕೇಯ, ವೀರ ಭದ್ರ ಇವರೆಲ್ಲರೂ ಶಿವಭಕ್ತ ಕುಟುಂಬವರು, ಶಿವನನ್ನು ಧ್ಯಾನಿಸುವವರಾಗಿದ್ದಾರೆ.
ಪರಮಾತ್ಮ ದೇಹಾತೀತ ಎಂದು ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಹಲವಾರು ಶಿವಶರಣರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ವಚನಗಳ ಸಹಿತ ಅವರು ವಿಶ್ಲೇಷಿಸಿದರು.
ನಮ್ಮದು ವಿಶ್ವಮಾನ್ಯ ಸಂಸ್ಕೃತಿ
ಭಾರತ ಸನಾತನ ದೇವೀ, ಧರ್ಮದ ದೇಶವಾಗಿದೆ. ಆದಿ ಸನಾತನ ದೇವಿ ದೇವತೆಗಳು ಈ ಪವಿತ್ರ ಭೂಮಿಯಲ್ಲಿ ಹಿಂದೆ ಇದ್ದರು. ಮುಂದೆಯೂ ಇರಲಿದ್ದಾರೆ. ಈ ಕಾರಣಕ್ಕಾಗಿಯೇ ಸಂಸ್ಕೃತಿ ವಿಶ್ವಮಾನ್ಯವಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ಜನಿಸಲು ಅನೇಕ ಜನ್ಮಗಳ ಪೂಜಾ ಫಲ ಇರಬೇಕು ಎಂದು ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.
ಋಷಿ, ತಪಸ್ವಿ, ಆಚಾರ್ಯ, ಪಂಡಿತರ, ಶರಣರ, ಸಂತರ, ದಾಸರ ಯೋಗಿಗಳ ದೇಶವಿದು. ಈ ದೇಶದಲ್ಲಿ ಪರಮಾತ್ಮನು ಅವತರಿಸಿದ್ದಾನೆ ಎಂಬ ಮಾತನ್ನು ನಾವು ನೆನಪಿಸಿಕೊಳ್ಳ ಬೇಕಿದೆ ಎಂದು ಹೇಳಿದರು.
ಇಂತಹ ದೇಶದ ನಾಗರಿಕತೆ, ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ಇಲ್ಲಿ ಜನಿಸಲು ಅನೇಕ ಜನ್ಮಗಳ ಪೂಜಾಫಲ ಬೇಕು. ಇಲ್ಲದಿದ್ದರೆ ಇಂತಹ ಶ್ರೇಷ್ಠ ಸಂಸ್ಕೃತಿಗಳ ಧರಣಿ ಮತ್ತೆಲ್ಲೂ ಇಲ್ಲ. ಜಗತ್ತಿನಲ್ಲಿ ದೇವರ ಕಲ್ಪನೆ, ಪರಿಕಲ್ಪನೆಯನ್ನು ದೇವರ ಅಸ್ತಿತ್ವನ್ನು ಜನಮನಕ್ಕೆ ತುಂಬಿದ ದೇಶವಿದು. ವೇದೋಪನಿಷತ್ತುಗಳಲಲ್ಲಿ ಈ ಸತ್ಯವನ್ನು ಪ್ರತಿಪಾದಿಸಲಾಗಿದೆ ಎಂದು ಹೇಳಿದರು.
ಶಿವ ಯಾರು ? ಶಂಕರ ಯಾರು ? ಎಂಬ ಸತ್ಯವನ್ನು ತಿಳಿಯಬೇಕು. ಯತಾರ್ಥವಾಗಿ ಶಿವನ ಪರಿಚಯವೇ ಇಲ್ಲದೇ ಶಿವನ ಬಳಿಗೆ ಹೋಗುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಅದ್ವೈತ ಸಿದ್ಧಾಂತದಲ್ಲಿ ಅತೀವ ಪರಿಣಿತರಾಗಿದ್ದ ಶಿವಶರಣ ಅಲ್ಲಮ ಪ್ರಭುಗಳು ತಾನೇ ಶಿವ ಎಂದು ಹೇಳಿಕೊಂಡಿದ್ದರು. ನಂತರ ಶರಣರ ಸಾಂಗತ್ಯದಿಂದ ನಾನು ಶಿವನಲ್ಲ. ಅದಕ್ಕಿಂತ ಮೇಲೊಬ್ಬ ಪರಮಾತ್ಮ ಇದ್ದಾನೆ ಎಂಬುದನ್ನು ಅರಿತರು. ಸಕಲ ಭುವನಾದಿ ದೇವಸ್ಥಾನಗಳಲ್ಲಿ ಪರಮಾತ್ಮ ಸ್ವರೂಪ ಜ್ಯೋತಿರ್ಲಿಂಗದ ಮುಂದೆ ನಿಂತು ಶಂಕರನ ಬಗ್ಗೆ ಮಂತ್ರಗಳನ್ನೂ, ಸಹಸ್ರ ನಾಮಾವಳಿಗಳನ್ನು ಹೇಳುತ್ತಾರೆ. ಆದ್ದರಿಂದ ಶಂಕರ ಹಾಗೂ ಪರಮಾತ್ಮ ನ ಕುರಿತ ಸತ್ಯವನ್ನು ಅರಿಯಬೇಕು. ಆತ್ಮ-ಪರಮಾತ್ಮನ ಸತ್ಯಬೋಧನೆ, ಅಧ್ಯಾತ್ಮಿಕ ಶಿಕ್ಷಣವನ್ನು ಶಿವಶರಣರು ಕೊಟ್ಟಿದ್ದಾರೆ. ಇದು ಅರಿಯದೇ ಪುರಾಣ ಮಿಶ್ರಿತ ದಾರಿa ಹಿಡಿದು ಹೋದರೆ ಪರಮಾತ್ಮನನ್ನು ಅರ್ಥೈಸಿ ಕೊಂಡು ಶಿವಯೋಗಿಗಳಾಗಲು ಸಾಧ್ಯವಿಲ್ಲ ಎಂದು ರಾಜಋಷಿಗಳು ಹೇಳಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋ ಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.