ಸರ್ವ ಧರ್ಮೀಯರ ಅಭಿವೃದ್ಧಿ, ರಕ್ಷಣೆಗೆ ಮುಖ್ಯಮಂತ್ರಿ ಬದ್ಧ : ಡಿಬಿ

ಸರ್ವ ಧರ್ಮೀಯರ ಅಭಿವೃದ್ಧಿ, ರಕ್ಷಣೆಗೆ ಮುಖ್ಯಮಂತ್ರಿ ಬದ್ಧ : ಡಿಬಿ

ದಾವಣಗೆರೆ, ಡಿ. 10- ಅಲ್ಪಸಂಖ್ಯಾತರೂ ಸೇರಿದಂತೆ, ಸರ್ವ ಧರ್ಮೀಯರ ಅಭಿವೃದ್ಧಿ ಮತ್ತು ರಕ್ಷಣೆಗೆ ಬದ್ಧ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧಿಕಾರದ ಆಸೆಗೆ ಮುಸ್ಲಿಂ ಮೀಸಲಾತಿ ಕಿತ್ತುಕೊಂಡು ದೇಶಕ್ಕೆ ಮಾದರಿಯಾದ ಕರ್ನಾಟಕ ಮೀಸಲಾತಿ ವ್ಯವಸ್ಥೆಯನ್ನು ಮಣ್ಣು ಪಾಲು ಮಾಡಿದ ಬಿಜೆಿಪಿಗೆ, ರಾಜ್ಯದ ಜನರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಣಿಸಿದ್ದಾರೆ ಎಂದರು.

ಸಿದ್ಧರಾಮಯ್ಯ ಎಲ್ಲಾ ಜಾತಿ, ಧರ್ಮದವರ ಕಾರ್ಯಕ್ರಮಗಳಿಗೆ ಹೋಗುವುದು  ಅವರ ರೂಢಿಯಾಗಿದ್ದು, ಅದೇ ರೀತಿ ಡಿ. 4 ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮದ ಸಮಾವೇಶದಲ್ಲಿ ಪಾಲ್ಗೊಂಡು ಈ ಸಮುದಾಯಕ್ಕೆ ಸಂವಿಧಾನ ಬದ್ಧ ಹಕ್ಕು ಪ್ರತಿಪಾದಿಸಿ, ಸರ್ವ ಜನಾಂಗದವರು ಸಮಾನರು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಈ ವಿಚಾರವನ್ನು ನೆಪವನ್ನಾಗಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಅಶ್ವತ್ಥ್‌ ನಾರಾಯಣ ಸೇರಿದಂತೆ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ  ನಡೆಸುತ್ತಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಮ್ಮದ್ ಜಿಕ್ರಿಯಾ, ಕೆ.ಎಂ. ಮಂಜುನಾಥ, ಎಂ.ಕೆ. ಲಿಯಾಕತ್ ಅಲಿ, ಡಿ.ಶಿವಕುಮಾರ್, ವೀರಭದ್ರಪ್ಪ, ಫಾರೂಖ್ ಉಪಸ್ಥಿತರಿದ್ದರು. 

 

error: Content is protected !!