ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ, ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಗಳ 60 ರ ಸಂಭ್ರಮದ 3ನೇ ದಿನ ಕಾರ್ಯಕ್ರಮವು ಇಂದು ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10.30 ಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆ – ಮೌಲ್ಯ ಪ್ರತಿಪಾದನೆ ವಿಷಯ ಕುರಿತು ವಿಚಾರ ಸಂಕಿರಣ ನಡೆಯುವುದು. ಅಧ್ಯಕ್ಷತೆಯನ್ನು ಬಸವರಾಜಪ್ಪ ಬೆಳಗಾವಿ ವಹಿಸುವರು. ವಿಷಯ ಮಂಡನೆ : ಡಾ. ವಾಮದೇವಪ್ಪ ಹೆಚ್.ವಿ., ಭಾಗವಹಿಸುವವರು : ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಮಹಿಮಾ ಪಟೇಲ್, ಡಾ. ಶಿವಕುಮಾರ್ ಹೆಚ್.ಬಿ., ಮಲ್ಲೇಶ್ ಬಿ.ಎನ್., ಉಮಾಪತಯ್ಯ ಟಿ.ಎಂ., ಶ್ರೀಮತಿ ಸುಜಾತ ಕೆ.ವಿ. ನಂತರ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಗೌರವಾರ್ಪಣೆ ನಡೆಯುವುದು.
ಸಂಜೆ 5 ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಮುರುಗೇಂದ್ರ ವಿ. ಚಿಗಟೇರಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹೆಚ್.ಎಸ್. ಶಿವಶಂಕರ್, ಅಜಯ್ಕುಮಾರ್, ಶ್ರೀಮತಿ ಮೀನಾಕ್ಷಿ, ಶ್ರೀನಿವಾಸ ದಾಸಕರಿಯಪ್ಪ ಆಗಮಿಸುವರು.