ದಾವಣಗೆರೆ, ಡಿ.7- ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ 6 ವರ್ಷ ಕಾರಾಗೃಹ ವಾಸ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ವಿ. ವಿಜಯಾನಂದ ಅವರು ತೀರ್ಪು ನೀಡಿದ್ದಾರೆ.
ಹರಿಹರ ತಾಲ್ಲೂಕು ಉಕ್ಕಡಗಾತ್ರಿಯ ಗುತ್ಯಮ್ಮ ಅವರ ಮಗಳಾದ ಶೀಲಾ ಅವರನ್ನು ಗಂಡ ಬನ್ನಿಕೋಡು ಗ್ರಾಮದ ಮಾಗಾನಹಳ್ಳಿ ಕೆಂಚಪ್ಪ ಮದ್ಯಪಾನ ಮಾಡಿ ಕೊಲೆ ಮಾಡಿದ್ದಾನೆಂದು ದೂರು ದಾಖಲಿಸಿದ್ದರು. ಸರ್ಕಾರಿ ವಕೀಲ ಸತೀಶ್ ಕುಮಾರ್ ನ್ಯಾಯ ಮಂಡನೆ ಮಾಡಿದ್ದರು.