ಶರಣ ಸಾಹಿತ್ಯ ಪರಿಷತ್ತು ಮೈಸೂರು, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ, ಸರ್ಕಾರಿ ಪ್ರೌಢಶಾಲೆ, ಆವರಗೆರೆ ಮತ್ತು ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ, ಆವರಗೆರೆ ಇವರ ಸಹಯೋಗದಲ್ಲಿ ಇಂದು ದತ್ತಿ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆವರಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುವ 726ನೇ ದತ್ತಿ ಲಿಂ. ಶರಣೆ ಶ್ರೀಮತಿ ಬಸಮ್ಮ ಮತ್ತು ಲಿಂ. ಮಾಗೋಡ್ರ ಪಕ್ಕೀರಪ್ಪ ಕೊಂಡಜ್ಜಿ ದತ್ತಿ (ದಾನಿಗಳು : ಎಂ. ಹನುಮನಗೌಡ ಬಿನ್ ಎಂ. ಪಕ್ಕೀರಪ್ಪ, ದಾವಣಗೆರೆ) ಕಾರ್ಯಕ್ರಮವನ್ನು ಆವರಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಪಿ. ಕೇಶವಮೂರ್ತಿ ಉದ್ಘಾಟಿಸುವರು.
ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಅಧ್ಯಕ್ಷತೆ ವಹಿಸುವರು. ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರ ವಿಷಯವಾಗಿ ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಭರಮಪ್ಪ ಮೈಸೂರು ಅನುಭಾವ ನುಡಿಗಳನ್ನಾಡುವರು.