ಎಲೆಬೇತೂರಿನಲ್ಲಿ ನಾಳೆ ಕಾರ್ತಿಕೋತ್ಸವ

ಎಲೆಬೇತೂರಿನಲ್ಲಿ  ನಾಳೆ ಕಾರ್ತಿಕೋತ್ಸವ

ದಾವಣಗೆರೆ. ಡಿ. 7- ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 9ರ ಶನಿವಾರ ನಡೆಯಲಿದೆ. ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಈಶ್ವರ-ಬಸವಣ್ಣ ದೇವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಬಿಲ್ವಾರ್ಚನೆ ಹಾಗೂ ಮಂಗಳಾರತಿ ನಡೆಯಲಿದೆ. ಸಂಜೆ 6.30ಕ್ಕೆ ಕಾರ್ತಿಕ ಹಚ್ಚುವುದು, ಮಹಾಮಂಗಳಾರತಿ ಹಾಗೂ ಫಳ್ಹಾರ ವಿನಿಯೋಗ ನಡೆಯಲಿದೆ.

error: Content is protected !!