ದಾವಣಗೆರೆ, ಡಿ.6- ನಗರದಲ್ಲಿ ಜರುಗಿದ ರಾಜ್ಯ ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂತಪೌಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಗೀತಾಂಜಲಿ ಕೆ.ಎಸ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅಲ್ಲದೇ ಮೈಸೂರು ಜಿಲ್ಲೆಯಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಆಯಿಷಾ ಸಿದ್ದೀಕ್ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ರಾಮನಗರದಲ್ಲಿ ನಡೆದ ಜ್ಯೂಡೋ ಸ್ಪರ್ಧೆಯಲ್ಲಿ ಕೃತಿ ಕೆ.ಯು 44ಕೆಜಿ ವಿಭಾಗದಲ್ಲಿ, ನಿಸರ್ಗ ಎನ್ 52 ಕೆಜಿ ವಿಭಾಗದಲ್ಲಿ, ಪವಿತ್ರ.ವಿ +70 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಹಾಗೂ ವೈಷ್ಣವಿ.ಕೆ.ಬಿ -57 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ವಿಜೇತರನ್ನು ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ, ಆಡಳಿತಾಧಿಕಾರಿ ಸಿಸ್ಟರ್ ಆಲ್ಬಿನ, ಪ್ರಾಂಶುಪಾಲರಾದ ಸಿಸ್ಟರ್ ಸಮಂತಾ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೆನೀಸಾ, ಸಿಸ್ಟರ್ ಸುಪ್ರಿಯ, ಕಾಲೇಜಿನ ಪ್ರಾಚಾರ್ಯ ಮೇಘನಾಥ್ ಕೆ ಟಿ, ದೈಹಿಕ ಶಿಕ್ಷಕ ಸಿದ್ದೇಶ್ ಅಭಿನಂದಿಸಿದ್ದಾರೆ.