ಹರಪನಹಳ್ಳಿ, ಡಿ.6- ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ನಮ್ಮ ತಂದೆಯವರು ಸಂಸದರಾಗಿ ಮೂರು ಬಾರಿ ಆಯ್ಕೆಯಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ಜನಪರಿಚಿತರಾಗಿದ್ದು, ಇಂದು ಅವರ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ ಎಂದು ಶಿವಕುಮಾರ ಒಡೆಯರ್ ತಿಳಿಸಿದರು.
ಈ ಕುರಿತು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಎಷ್ಟೇ ಗಾಳಿ ಬಿಸಿದರೂ ಫಲಿಸದು, ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಗಟ್ಟಿಯಾಗಿದ್ದು, ಕೇಂದ್ರದಲ್ಲಿ ಸಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಒಡೆಯರ್, ಮಹಾಸ್ವಾಮಿ, ನಿಂಗಪ್ಪ, ಸಂತೋಷ್, ಬಾಗಳಿ ರಮೇಶ್ ಉಪಸ್ಥಿತರಿದ್ದರು.