ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಅಂತರಕಾಲೇಜು ಪುರುಷರ ಮತ್ತು ಮಹಿಳೆಯರ ಜ್ಯೂಡೋ ಸ್ಪರ್ಧೆ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಯೂಡೋ ಪಟುಗಳ ಆಯ್ಕೆ ಪ್ರಕ್ರಿಯೆಯ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜೆ.ಎಸ್. ವೀರೇಶ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಬಿ.ಸಿ. ದಾದಾಪೀರ್ ವಹಿಸುವರು. ಪ್ರೊ.
ವೆಂಕಟೇಶ್, ಡಾ. ಬಿ.ಹೆಚ್. ವೀರಪ್ಪ, ಬಸವರಾಜ ಸಿ. ತಹಶೀಲ್ದಾರ್, ಡಾ. ಸಿ.ವಿ. ಲತಾ, ಸವಿತಾ ಬಿ. ಮೇಗಲಮನಿ, ಪ್ರೊ. ಎಸ್. ವೆಂಕಟೇಶ್ ಬಾಬು, ಪ್ರೊ. ಶಂಭುಲಿಂಗಪ್ಪ ನಲ್ಲನವರ್, ಪ್ರೊ. ಜಿ. ಮಂಜುನಾಥ್ ಅವರುಗಳ ಗೌರವ ಉಪಸ್ಥಿತಿಯಲ್ಲಿ ನಡೆಯುವುದು. ಶ್ರೀಮತಿ ಗೀತಾದೇವಿ ಉಪಸ್ಥಿತರಿರುವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರುಗಳ ಆಶ್ರಯದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದು.