ದಾವಣಗೆರೆ, ಡಿ.6- ಇದೇ ದಿನಾಂಕ 3 ರಂದು ನಗರದ ಖಾಸಗಿ ಬಸ್ ನಿಲ್ದಾಣದ ಮಳಿಗೆಯ ಮುಂದೆ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಮೃತನು ಸುಮಾರು 55 ವರ್ಷದವರಾಗಿದ್ದು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಒಂದು ಇಂಚು ಉದ್ದದ ತಲೆಗೂದಲು, ಕಪ್ಪುಬಿಳಿ ಮಿಶ್ರಿತ ದಾಡಿ ಹೊಂದಿರುತ್ತಾನೆ. ಮೃತನು ಮಾಸಲು ಬಿಳಿ ತುಂಬು ತೋಳಿನ ಶರ್ಟ್, ಬೂದು ಬಣ್ಣದ ಪ್ಯಾಂಟ್ ಮತ್ತು ನೇರಳೆ ಕಲರ್ ಅಂಡರ್ವೇರ್ ಧರಿಸಿರುತ್ತಾನೆ. ಸಂಬಂಧಪಟ್ಟವರು ಬಡಾವಣೆ ಪೊಲೀಸ್ ಠಾಣೆ ದೂರವಾಣಿ 08192-272012, ಡಿವೈಎಸ್ಪಿ ನಗರ ಕಛೇರಿ 08192-259213ಕ್ಕೆ ಸಂಪರ್ಕಿಸಬಹುದು.