ಪ್ರತಿ ಜಿಲ್ಲೆಯಲ್ಲಿ ಪತ್ರಿಕಾ ವಿತರಕರ ನೋಂದಣಿ, ಹೊಸ ಯೋಜನೆಗೆ ಸೇರ್ಪಡೆ

ಪ್ರತಿ ಜಿಲ್ಲೆಯಲ್ಲಿ ಪತ್ರಿಕಾ ವಿತರಕರ ನೋಂದಣಿ, ಹೊಸ ಯೋಜನೆಗೆ ಸೇರ್ಪಡೆ

ಬೆಂಗಳೂರು, ಡಿ.6- ಪ್ರತಿ ಜಿಲ್ಲೆಯಲ್ಲಿಯೂ ಪತ್ರಿಕಾ ವಿತರಕರ ನೋಂ ದಣಿ ಮಾಡಿ, ಹೊಸ ಯೋಜನೆಗೆ ಸೇರ್ಪಡೆ ಮಾಡಲಾಗುವುದು ಎಂದು ಕಾರ್ಮಿಕ ಆಯುಕ್ತ ಡಾ. ಹೆಚ್.ಎನ್.ಗೋ ಪಾಲ ಕೃಷ್ಣ ತಿಳಿಸಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡ ಬ್ಲ್ಯೂಜೆ) ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ವಿತರಕರ ಪರವಾಗಿ ತಮ್ಮನ್ನು ಭೇಟಿ ಮಾಡಿ ಸಲ್ಲಿಸಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಿಗೆ 2 ಲಕ್ಷ, ವೈದ್ಯಕೀಯ ನೆರವಿಗೆ 1 ಲಕ್ಷ ರೂ. ನೆರವಿನ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಹೊಸ ಯೋಜನೆಯ ಜಾರಿಗೆ ವಿತರಕರ ಸಹಕಾರ ಅಗತ್ಯವಾಗಿದೆ. ಯೋಜನೆ ಸದುಪಯೋಗಪಡಿಸಿ ಕೊಳ್ಳಲು ಸಂಘಟಿತರಾಗಿ ಮುಂದೆ ಬರುವಂತೆ ಅವರು ಸಲಹೆ ನೀಡಿದರು. 

ವಿತರಕರು ಅಪಘಾತ ಮತ್ತಿತರ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ನೆರವಾಗಲು ಯಾವುದೇ ಯೋಜನೆಗಳು ಇರಲಿಲ್ಲ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅರಿತು, ಕಾರ್ಮಿಕ ಇಲಾಖೆ ಯೋಜನೆ ವ್ಯಾಪ್ತಿಗೆ ತರುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕೆಲಸವನ್ನು ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಮಿಕಾಧಿಕಾರಿ ರವಿಕುಮಾರ್ ಹಾಜರಿದ್ದರು .

error: Content is protected !!