ದಾವಣಗೆರೆ, ಡಿ.6- ತಾಲ್ಲೂಕಿನ ಹದಡಿ ಗ್ರಾಮದಲ್ಲಿ ಓಡಾಡಿಕೊಂಡಿದ್ದ 25 ವರ್ಷ ವಯಸ್ಸಿನ ಮುರುಳಿ ಎಂಬ ಅಪರಿಚಿತ ವ್ಯಕ್ತಿ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕಳೆದ ನವೆಂಬರ್ 24 ರಂದು ಉಸಿ ರಾಟ ತೊಂದರೆಯಿಂದ ಮೃತಪಟ್ಟಿದ್ದಾನೆ. ಕೋಲು ಮುಖ, ತೆಳ್ಳನೆಯ ಮೈಕಟ್ಟು ಹಾಗೂ ಗೋಧಿ ಬಣ್ಣ ಹೊಂದಿದ್ದು, ಬಿಳಿ ಬಣ್ಣದ ಮತ್ತು ಸಿಮೆಂಟ್ ಬಣ್ಣಗಳ ದಪ್ಪಗೆರೆಗಳಿರುವ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಸಂಬಂಧ ಪಟ್ಟವರು ದೂರವಾಣಿ : 08192-218405 ಅಥವಾ 08192-253100ಗೆ ಸಂಪರ್ಕಿಸಬಹುದು.
January 12, 2025