1015.6 ಎಂ.ಟಿ ಸರಕು ಸಾಗಣೆ ಮಾಡಿದ ಭಾರತೀಯ ರೈಲ್ವೆ

1015.6 ಎಂ.ಟಿ ಸರಕು ಸಾಗಣೆ ಮಾಡಿದ ಭಾರತೀಯ ರೈಲ್ವೆ

ಹುಬ್ಬಳ್ಳಿ, ಡಿ.4- ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ 36.9 ಮಿಲಿಯನ್ ಟನ್ ಹೆಚ್ಚಾಗಿದೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.

2023 ರ ಏಪ್ರಿಲ್ – ನವೆಂಬರ್ ಅವಧಿಯಲ್ಲಿ ಸರಕು ಸಾಗಣೆಯಿಂದ ಭಾರತೀಯ ರೈಲ್ವೆ 110007.5 ಕೋಟಿ ರೂ. ಆದಾಯ ಗಳಿಸಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ ಆದಾಯ 4102.4 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಭಾರತೀಯ ರೈಲ್ವೆ ನವೆಂಬರ್ 2023 ರಲ್ಲಿ 128.4 ಮಿಲಿಯನ್ ಟನ್ ಸರಕು ಸಾಗಣೆಯನ್ನು ಸಾಧಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯ ಸರಕು ಸಾಗಣೆಗಿಂತ ಶೇ.4.3 ಹೆಚ್ಚಾಗಿದೆ.

ಭಾರತೀಯ ರೈಲ್ವೆಯು ಏಪ್ರಿಲ್ – ನವೆಂಬರ್ 2023ರ ಅವಧಿಯಲ್ಲಿ 1015.669 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 978.724 ಮಿಲಿಯನ್ ಟನ್ ಸರಕುಗಳನ್ನು ಲೋಡ್‌ ಮಾಡಲಾಗಿತ್ತು. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಸುಮಾರು 36.945 ಮಿಲಿಯನ್ ಟನ್ ಹೆಚ್ಚಾಗಿದೆ. ಭಾರತೀಯ ರೈಲ್ವೆ ಏಪ್ರಿಲ್ – ನವೆಂಬರ್  2023 ಅವಧಿಯಲ್ಲಿ 110007.5 ಕೋಟಿ ರೂ.ಗಳನ್ನು ಗಳಿಸಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 105905.1 ಕೋಟಿ ರೂ.ಗಳನ್ನು ಗಳಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ರೂ 4102.445 ಕೋಟಿ ಹೆಚ್ಚಳವಾಗಿದೆ.

ಭಾರತೀಯ ರೈಲ್ವೆಯು ನವೆಂಬರ್ 2023 ರಲ್ಲಿ 128.419 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಲಾಗಿದ್ದು, ಇದು ಕಳೆದ ವರ್ಷದ ಇದೆ ಅವಧಿಯ (123.088 ಮಿಲಿಯನ್ ಟನ್ ಲೋಡಿಂಗ್) ಕ್ಕಿಂತ ಶೇ.4.33 ಹೆಚ್ಚಳವಾಗಿದೆ. ಭಾರತೀಯ ರೈಲ್ವೆಯು ನವೆಂಬರ್ 2023ರಲ್ಲಿ 14077.94 ಕೋಟಿ ರೂ.ಗಳ ಸರಕು ಆದಾಯವನ್ನು ಗಳಿಸಿದ್ದು, ಇದು ಕಳೆದ ವರ್ಷ ಇದೆ ಅವಧಿಯಲ್ಲಿ ಗಳಿಸಿದ ಆದಾಯ (13559.83 ಕೋಟಿ ರೂ.) ಕ್ಕಿಂತ ಶೇ.3.82 ಹೆಚ್ಚಳವಾಗಿದೆ.

ಭಾರತೀಯ ರೈಲ್ವೆಯು 65.48 ಮಿಲಿಯನ್ ಟನ್ ಕಲ್ಲಿದ್ದಲು, 14.99 ಮಿಲಿಯನ್ ಟನ್ ಕಬ್ಬಿಣದ ಅದಿರು, 5.25 ಮಿಲಿಯನ್ ಟನ್ ಪಿಗ್ ಐರನ್ ಹಾಗೂ ಸಿದ್ಧಪಡಿಸಿದ ಸ್ಟೀಲ್, 5.58 ಮಿಲಿಯನ್ ಟನ್ ಸಿಮೆಂಟ್, 4.61 ಮಿಲಿಯನ್ ಟನ್ ಕ್ಲಿಂಕರ್, 3.82 ಮಿಲಿಯನ್ ಟನ್ ಆಹಾರ ಧಾನ್ಯ, 5.97 ರಸಗೊಬ್ಬರಗಳು, 4.176 ಮಿಲಿಯನ್ ಟನ್ ಖನಿಜ ತೈಲ, ಕಂಟೇನರ್‌ಗಳಲ್ಲಿ 6.91 ಮಿಲಿಯನ್ ಟನ್ ಮತ್ತು ಉಳಿದ ಇತರ ಸರಕುಗಳಲ್ಲಿ 8.59 ಮಿಲಿಯನ್ ಟನ್ ಲೋಡ್ ಮಾಡಿದೆ.

ಭಾರತೀಯ ರೈಲ್ವೆ ವ್ಯಾಪಾರವನ್ನು ಸುಲಭಗೊಳಿಸಲು ಮತ್ತು ಸ್ಪರ್ಧಾತ್ಮಕ ಬೆಲೆಗಳಲ್ಲಿ ಸೇವಾ ವಿತರಣೆಯನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಿದೆ. ಗ್ರಾಹಕ ಕೇಂದ್ರಿತ ವಿಧಾನ ಮತ್ತು ಚುರುಕಾದ ನೀತಿ ನಿರೂಪಣೆಯ ಬೆಂಬಲದೊಂದಿಗೆ ವ್ಯವಹಾರ ಅಭಿವೃದ್ಧಿ ಘಟಕಗಳ ಕೆಲಸವು ರೈಲ್ವೆಗೆ ಈ ಮಹತ್ವದ ಸಾಧನೆಯತ್ತ ಸಹಾಯ ಮಾಡಿದೆ ಎಂದು ಹೆಗಡೆ ವಿವರಿಸಿದ್ದಾರೆ.

error: Content is protected !!