ನಿಟ್ಟುವಳ್ಳಿಯ ಸರ್ಕಾರಿ ಶಾಲೆಗೆ ಡೆಸ್ಕ್‌ ಕೊಡುಗೆ

ನಿಟ್ಟುವಳ್ಳಿಯ ಸರ್ಕಾರಿ ಶಾಲೆಗೆ ಡೆಸ್ಕ್‌ ಕೊಡುಗೆ

ದಾವಣಗೆರೆ, ಡಿ.4-  ನಗರದ ಇ.ಎಸ್.ಐ ಆಸ್ಪತ್ರೆ ರಸ್ತೆಯಲ್ಲಿ ಇರುವ ನಿಟ್ಟುವಳ್ಳಿ ಪ್ರಾಥಮಿಕ, ಪ್ರೌಢಶಾಲೆಗೆ ಇನ್ ಸೈಟ್ಸ್ ಐಎಎಸ್ ಸಂಸ್ಥೆ ವಿನಯ್ ಮಾರ್ಗ ಟ್ರಸ್ಟ್‌ನ  ವಿನಯಕುಮಾರ್ ಅಭಿಮಾನಿ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಡೆಸ್ಕ್ ಕೊಡುಗೆ ನೀಡಲಾಯಿತು.

ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚಿನದಾಗಿ ಅಭ್ಯಾಸ ಮಾಡುವ ಈ ಶಾಲೆಗೆ ನೆರವು ನೀಡಿದ ವಿನಯಕುಮಾರ್ ಅವರನ್ನು ಆವರಣದಲ್ಲಿ ನಡೆದ ಸಮಾರಂಭದಲ್ಲಿ  ಹೃದಯಸ್ಪರ್ಶಿ ಸನ್ಮಾನ ನೀಡಿ, ಗೌರವಿಸಲಾಯಿತು. 

ರಾಜಕೀಯವಾಗಿ ಅಭಿವೃದ್ಧಿ ಕನಸುಗಳ ಹೊತ್ತು  ತಮ್ಮದೇ ವಿಶಿಷ್ಟ, ವಿಭಿನ್ನ ರೀತಿಯ ವಿಷನ್ ಇಟ್ಟುಕೊಂಡು     ಸಮ ಸಮಾಜದ ಕನಸು ನನಸು ಮಾಡಲು ಹೊರಟಿರುವ ಅವರ ಸೇವೆ ಯನ್ನು ಸ್ಮರಿಸಿ, ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯಕುಮಾರ್,  ತಮಗೆ ಇರುವ ಒಂದಿಷ್ಟು ಆದಾಯದಲ್ಲಿ ಇಂಥ ಸಮಾಜಮುಖಿ ಕಾರ್ಯ ಮಾಡುವ ಉದ್ದೇಶದಿಂದ ಅಳಿಲು ಸೇವೆ ಸಲ್ಲಿಸುತ್ತಿರುವೆ. ಕೆಲವರಿಗೆ ಹಣವಿದ್ದರೆ ಕೊಡುವ ಮನಸ್ಸು ಇರುವುದಿಲ್ಲ. ಇನ್ನು ಕೆಲವರಿಗೆ ಕೊಡುವ ಮನಸ್ಸಿದ್ದರೂ ಹಣದ ಕೊರತೆ. ಹಾಗಾಗಿ ಗುಡಿ, ಗೋಪುರ ನಿರ್ಮಾಣ ಮಾಡುವುದಕ್ಕಿಂತ ಇಂತಹ ಹಿಂದುಳಿದ ಶಾಲೆಗಳ ಸುಧಾರಣೆಗೆ ಸರ್ವರೂ ಕೈಜೋಡಿಸಿದರೆ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ    ಕಡಿಮೆ ಇಲ್ಲ ಎಂಬಂತೆ ನಿಮ್ಮ ಸುತ್ತ ಮುತ್ತಲಿನ ಹಳ್ಳಿಗಳು ಮತ್ತು ನಗರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ಹೇಳಿದರು.

ವೇದಿಕೆ ಮೇಲೆ ಮುಖ್ಯೋಪಾಧ್ಯಾಯ ಸುರೇಶ್,  ಎ. ಕೆ. ಚಂದ್ರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ, ಸದಸ್ಯರಾದ ಹಾಲೇಶ್ ನಾಯ್ಕ, ಟಿ. ಎಸ್. ಸ್ವಾಮಿ, ಗಾಯತ್ರಮ್ಮ, ಸುಧಾ ಜಗದೀಶ್, ಪ್ರೇಮ, ಲೀಲಾವತಿ ರಾಮಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಆರಂಭದಲ್ಲಿ ಶಿಕ್ಷಕ ಜಯಪ್ಪ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

error: Content is protected !!