ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ
ದಾವಣಗೆರೆ, ಡಿ. 4- 20ನೇ ಶತಮಾನದ ದಾರ್ಶನಿಕ, ಚಿಂತಕ ಜಿದ್ದು ಕೃಷ್ಣಮೂರ್ತಿಯವರು ತಮ್ಮ ತ್ತೊಂಭತ್ತೊಂದುವರೆ ವರ್ಷದ ಜೀವನದಲ್ಲಿ ಸರ್ವರ ದುಃಖ ನಿವಾರಿಸಿ ಆನಂದದ ಪಯಣವ ತಾವೂ ಮಾಡಿ, ಜಗತ್ತಿಗೂ ಮಾರ್ಗದರ್ಶಕರಾದರು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅಭಿಪ್ರಾಯಿಸಿದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ್ ಕಚೇರಿಯಲ್ಲಿ ಜರುಗಿದ `ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿದ್ದು ಕೃಷ್ಣಮೂರ್ತಿ ಎಲ್ಲಾ ಜಾತಿ, ಕುಲ, ದೇಶ, ಭಾಷೆ ಅವರು ಭೇದಗಳಿಂದ ಮುಕ್ತರಾಗಿ ದ್ದರು. ತಾವು ವಿಶ್ವ ಪ್ರಜೆ ಎಂದು ಹೇಳಿಕೊಳ್ಳುತ್ತಿದ್ದರು. ಪ್ರೀತಿಯಿಂದ, ಆನಂದವಾಗಿ ಜೀವನ ಸಾಗಿಸುವುದು ಹೇಗೆ? ಎಂದು 65 ವರ್ಷಗಳ ಕಾಲ ಭಾಷಣ ಮಾಡುತ್ತಾ ಜೀವನ ಸಾಗಿಸಿದರು.
ಆಲೋಚನೆಗಳ ಖ್ಯಾತಿ, ಹಣ, ನಿರರ್ಥಕ ಆಲೋಚನೆಗಳಲ್ಲಿ ಸಿಕ್ಕಾಕಿಕೊಂಡು ಅಮೂಲ್ಯ ವಾದ ಜೀವನ ಹಾಳುಮಾಡಿಕೊಳ್ಳುತ್ತಾನೆ. ಜಾನಪದದಲ್ಲಿನ ಕವಿತೆಯಂತೆ `ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾಗಿ, ಮಾತಿನಲ್ಲಿ ಚೂಡಾಮಣಿಯಾಗಿ, ಜಗಕ್ಕೆ ಜ್ಯೋತಿಯಾಗು..’ ಎನ್ನುವಂತೆ ಅವರು ಇಡೀ ಜೀವನ ನಡೆಸಿದರು ಎಂದು ಬಸವಲಿಂಗಪ್ಪ ಸ್ಮರಿಸಿದರು.
ಪ್ರೊ. ಎಂ. ಬಸವರಾಜ್ ಮಾತನಾಡಿ ಜೆ.ಕೆ.ಯವರ ಚಿಂತನೆಗಳನ್ನು ನಾವು ಗಂಭೀರವಾಗಿ ಪರಿಗಣಿಸಿ ಬಾಳುತ್ತಾ ಹೋದರೆ ಅರಿವು ಆಧಾರಿತ ಸಾಮೂಹಿಕ ಕಾರ್ಯಗಳಾಗುತ್ತವೆ. ಸಮಷ್ಟಿ ಜೀವನ ಚೆನ್ನವಾದರೆ, ವ್ಯಕ್ತಿಯ ಜೀವನವೂ ಚೆನ್ನಗಾ ಗುತ್ತದೆ. ಆ ದೆಸೆಯಲ್ಲಿ ನಾವು ಬಾಳೋಣ ಎಂದರು.
ಚಿಂತಕ ಮಲ್ಲಾಬಾದಿ ಬಸವರಾಜ್ ಮಾತನಾಡಿ, ಜೆ.ಕೆ ಯವರ ಚಿಂತನೆಗಳಿಂದ ಪ್ರೇರೇಪಿತನಾದ ನಾನು, ವೈಯಕ್ತಿಕವಾಗಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಜೆ.ಕೆಯವರ ವೈಚಾರಿಕ ಮತ್ತು ಮಾನವೀಯ ಚಿಂತನೆಗಳನ್ನು ಅಳವಡಿಸಿಕೊಂಡಿರುವುದರಿಂದ ನನ್ನ ಜೀವನ ಆನಂದಮಯವಾಗಿದೆ ಎಂದರು.
ಚಿಂತನ-ಮಂಥನದಲ್ಲಿ ದಯಾನಂದ್, ರಾಮನಗೌಡ ಕುಸಗೂರು, ರಾಜಗೋಪಾಲ್, ಮುರಳೀಧರ ಮುಂತಾದವರಿದ್ದರು.