ದಾವಣಗೆರೆ, ಡಿ.3- ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿತರಾಗಿ ಬಿಡುಗಡೆಯಾಗಿರುವ ಚಿತ್ರದುರ್ಗದ ಮುರುಘಾ ಶರಣರನ್ನು ಬೀದರ್ ಇಲ್ಲವೇ ಗುಲ್ಬರ್ಗಾ ಜಿಲ್ಲೆಗೆ ಸ್ಥಳಾಂತರಿಸುವಂತೆ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರು ದಾವಣಗೆರೆಯಲ್ಲಿ ಇದ್ದ ಕಾರಣ, ಈ ಕೇಸಿನ ಸಂತ್ರಸ್ಥರು ದಾವಣಗೆರೆಯಲ್ಲಿ ಇರುವ ಕಾರಣ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಸ್ಥಳಾಂತರ ಮಾಡಬೇಕು ಎಂದರು.
January 23, 2025