ದಾವಣಗೆರೆ, ಡಿ. 3- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ರವರ 67ನೇ ಮಹಾಪರಿನಿರ್ವಾಣ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿಯಾತ್ರೆ ನಾಡಿದ್ದು ದಿನಾಂಕ 5ರಂದು ನಗರಕ್ಕೆ ಆಗಮಿಸಲಿದೆ.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿಯು 5 ರಂದು ಸಂಜೆ 7 ಗಂಟೆಗೆ ಕೆಇಬಿ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಬಳಿ ಆಗಮಿಸುವ ಜ್ಯೋತಿಯಾತ್ರೆಯನ್ನು ಸ್ವಾಗತಿಸಿ, ನಂತರ ಬೀಳ್ಕೊಡಲಿದೆ.
ನಗರದಿಂದ ಹುಬ್ಬಳ್ಳಿ, ಬೆಳಗಾಂ, ಮುಂಬೈನ ದಾದರ್ ಕಡಲತೀರ, ಶಿವಾಜಿ ಪಾರ್ಕ್, ಚೈತನ್ಯ ಭೂಮಿಗೆ ಜ್ಯೋತಿಯಾತ್ರೆ ಮತ್ತು ನಾಗಪುರ್ ದೀಕ್ಷಾ ಭೂಮಿಗೆ ತಲುಪುತ್ತದೆ ಎಂದು ತಿಳಿಸಿರುವ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸಿ.ಬಸವರಾಜ್, ಈ ಯಾತ್ರೆಯಲ್ಲಿ ನಿರಾಶ್ರಿತರಿಗೆ, ಎಲ್ಲಾ ಜಾತಿಯ ಬಡವರಿಗೆ ಆಶ್ರಯ ಮನೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.