ಮಲೇಬೆನ್ನೂರಿನಲ್ಲಿ ಮತ್ತೆ ಮುಷ್ಯ ದಾಳಿ : ಯುವಕನಿಗೆ ಗಾಯ

ಮಲೇಬೆನ್ನೂರಿನಲ್ಲಿ ಮತ್ತೆ ಮುಷ್ಯ  ದಾಳಿ : ಯುವಕನಿಗೆ  ಗಾಯ

ಮಲೇಬೆನ್ನೂರು, ಡಿ.3- ಪಟ್ಟಣದಲ್ಲಿ ಮುಷ್ಯಗಳ ಉಪಟಳ ಮುಂದುವರಿದಿದ್ದು, ಭಾನುವಾರ ಓರ್ವ ಯುವಕನ ಕೈಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಪಟ್ಟಣದ ಜನ ಮತ್ತೆ ಭಯಭೀತರಾಗಿದ್ದು, ಮುಷ್ಯಗಳ ಕಾಟದಿಂದ ಮುಕ್ತಿ ಎಂದು ? ಎಂಬ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ಪುರಸಭೆ ಹಾಗೂ ಅರಣ್ಯ ಇಲಾಖೆಯವರು ಸೇರಿ ಈಗಾಗಲೇ 3 ಮುಷ್ಯಗಳನ್ನು ಸೆರೆ ಹಿಡಿದಿದ್ದಾರೆ. ಈಗ ಮತ್ತೊಂದು ಮುಷ್ಯ ಪಟ್ಟಣಕ್ಕೆ ಬಂದಿದ್ದು, ಜನರ ಮೇಲೆ ದಾಳಿ ಮಾಡುವ ಮುಂಚಿತವಾಗಿ ಸೆರೆ ಹಿಡಿಯಬೇಕೆಂದು ಗಾಯಗೊಂಡ ಯುವಕನಿಗೆ ಚಿಕಿತ್ಸೆ ನೀಡಿದ ಹಿರಿಯ ವೈದ್ಯ ಡಾ. ಟಿ.ಬಸವರಾಜ್ ಮನವಿ ಮಾಡಿದ್ದಾರೆ.

error: Content is protected !!