ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಶನ್ನ ವಾಣಿಜ್ಯ ವಿಭಾಗದ ವತಿಯಿಂದ 5ನೇ ವಾಣಿಜ್ಯೋತ್ಸವ-2023 ಬಾಪೂಜಿ ಬಿ ಸ್ಕೂಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಹುಬ್ಬಳ್ಳಿಯ ಕೆಎಲ್ಇ ಟೆಕ್ನಾಲಾಜಿಕಲ್ ಯುನಿವರ್ಸಿಟಿಯ ಸ್ಕೂಲ್ಸ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರೀಸರ್ಚ್ ನಿರ್ದೇಶಕ ಡಾ. ಎಂ.ಆರ್. ಶೋಲ್ಲಾಪುರ್ ಅತಿಥಿಗಳಾಗಿ ಆಗಮಿಸಿ, ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಶನ್ನ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸುವರು. ಪ್ರಾಂಶುಪಾಲ ಡಾ. ಬಿ. ವೀರಪ್ಪ, ನಿರ್ದೇಶಕ ಡಾ. ಎಚ್.ವಿ. ತ್ರಿಭುವಾನಂದ ಸೇರಿದಂತೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿಗಳು ಉಪಸ್ಥಿತರಿರುವರು.
ಮಧ್ಯಾಹ್ನ 2 ಗಂಟೆಯ ನಂತರ ದ್ವಿತೀಯ ಪಿಯುಸಿ ಪರೀಕ್ಷಾ ತಯಾರಿ ಕುರಿತು ಕಾರ್ಯಾಗಾರವನ್ನು ಬೆಂಗಳೂರಿನ ಸೌಂದರ್ಯ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಾಬಲೇಶ್ವರ ತುಂಗಾ ನಡೆಸಿಕೊಡುವರು. ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ಸೌಂದರ್ಯ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಾಬಲೇಶ್ವರ ತುಂಗಾ ಪ್ರಶಸ್ತಿ ಪ್ರದಾನ ಮಾಡುವರು.