ಮಲೇಬೆನ್ನೂರು, ನ.30- ಪಟ್ಟಣದಲ್ಲಿ ಮುಷ್ಯಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿದಿನ ಒಬ್ಬರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಇದರಿಂದ ಪಟ್ಟಣದ ಜನತೆ ಬೇಸತ್ತು ಹೋಗಿದ್ದು, ಮುಷ್ಯಗಳ ಕಾಟದಿಂದ ಮುಕ್ತಿ ಯಾವಾಗ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ.
ಈ ಹಿಂದೆ ಜನರಿಗೆ ಬಹಳ ತೊಂದರೆ ಕೊಡುತ್ತಿದ್ದ 2 ಮುಷ್ಯಗಳನ್ನು ಪುರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಶ್ರಮವಹಿಸಿ, ಪ್ರತ್ಯೇಕವಾಗಿ ಸೆರೆ ಹಿಡಿದು, ಶಿವಮೊಗ್ಗ ಸಮೀಪದ ಅರಣ್ಯ ಧಾಮಕ್ಕೆ ಬಿಟ್ಟಿದ್ದಾರೆ. ಏತನ್ಮಧ್ಯೆ, ಕಳೆದ 3-4 ದಿನಗಳಿಂದ ಮತ್ತೊಂದು ಮುಷ್ಯ 3-4 ಜನರ ಮೇಲೆ ದಾಳಿ ಮಾಡಿ, ಗಾಯಗೊಳಿಸಿದ್ದು, ಕೂಡಲೇ ಎಚ್ಚೆತ್ತ ಪುರಸಭೆ ಹಾಗೂ ಅರಣ್ಯ ಇಲಾಖೆಯವರು ಸೇರಿ ಆ ಮುಷ್ಯವನ್ನು ಗುರುವಾರ ಸೆರೆ ಹಿಡಿದಿದ್ದಾರೆ ಎಂದು ಮುದೇಗೌಡ್ರ ತಿಪ್ಪೇಶ್ ತಿಳಿಸಿದ್ದಾರೆ.