ಭಾವಸಾರ ವಿಷನ್ ಇಂಡಿಯಾ ವತಿಯಿಂದ ನಡೆದ ಶಿಬಿರವನ್ನು ನಡೆಸಿಕೊಟ್ಟ ಕೀಲು-ಮೂಳೆ ತಜ್ಞ ಡಾ. ಹರೀಶ್ ಪುರಾಣಿಕ್
ದಾವಣಗೆರೆ, ನ. 30- ಭಾವಸಾರ ವಿಷನ್ ಇಂಡಿಯಾ ದಾವಣಗೆರೆ ಹಾಗೂ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಘಟಕ -2 ಹಾಗೂ ಸ್ಪೇರ್ ಕ್ಲಿನಿಕ್ ದಾವಣಗೆರೆ ವತಿಯಿಂದ ಉಚಿತ ಕೀಲು, ಮೂಳೆ, ಮಂಡಿ ಚಿಪ್ಪು ಮರು ಜೋಡಣೆ, ಮೂಳೆ ಸಾಂದ್ರತೆ ತಪಾಸಣಾ ಶಿಬಿರ ನಡೆಸಲಾಯಿತು.
ರಮೇಶ್‌ಬಾಬು ಗುಜ್ಜರ್, ಶ್ರೀಮತಿ ಸರಳಾ ಅಮಟೆ, ಅಶೋಕ್ ನವಲೆ ಹಾಗೂ ಎ.ವಿ. ಅಶೋಕ್ ಅಂಬರ್‌ಕರ್, ಈಶ್ವರ್ ರಾವ್ ಗುಜ್ಜರ್, ಶಂಕರ್‌ರಾವ್ ನವಲೆ, ಬೆಂಗಳೂರಿನ ಕೀಲು-ಮೂಳೆ ತಜ್ಞ ಡಾ. ಹರೀಶ್ ಪುರಾಣಿಕ್, ಡಾ. ನಿತೀಶ್ ಕೊಟ್ರಪ್ಪ ಅವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿವಿಐ ಹಿರಿಯ ಸದಸ್ಯ ಗಣೇಶ ವಾದೋನೆ ಹಾಗೂ ವಿಷನ್ ಯೋಜನಾ ನಿರ್ದೇಶಕ ರಮೇಶ್‌ಬಾಬು ಅವರ ಪ್ರಾಯೋಜಕತ್ವದಲ್ಲಿ ರೋಗಿಗಳಿಗೆ ಔಷಧಗಳನ್ನು ವಿತರಿಸಲಾಯಿತು. ಶಂಕರ್‌ರಾವ್ ಬೋಂದಾಡೆ, ಸುರೇಶ್ ಪಟಕೆ, ಮಂಜುನಾಥ್ ಗಡ್ಡಾಳೆ, ಮಹೇಶ್ ಶೆಂಡಿಗಿ, ಅರುಣ ಅಂಬರ್‌ಕರ್, ನಯನ ಅಂಬರ್‌ಕರ್, ಅನುಸೂಯಾ ಗುಜ್ಜರ್, ಕವಿತ ಸರ್ವದೆ, ಶ್ರೀಮತಿ ಪ್ರೀತಿ ಲೋಖಂಡೆ ಉಪಸ್ಥಿತರಿದ್ದರು.