ವಾಸನ : ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯಲ್ಲಿ ಶಿವಲಿಂಗ ಶಿವಾಚಾರ್ಯ ಶ್ರೀ
ಮಲೇಬೆನ್ನೂರು, ನ.30- ಮನುಷ್ಯ ನಿರ್ಬಂಧ ವಿಧಿಸಿಕೊಂಡಾಗ ಮಾತ್ರ ಮನಸ್ಸು ಜಾಗೃತವಾಗುತ್ತದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾ ಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ವಾಸನ ಗ್ರಾಮದ ಮಾರ್ಕಂಡೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಶರೀರ ಉತ್ತಮವಾಗಿರಲು ಸೇವೆ ಮಾಡಬೇಕು. ಸಮಾಜದಲ್ಲಿ ನಿರುಪಯುಕ್ತ ವಸ್ತು ಯಾವುದೂ ಇಲ್ಲ. ಒಂದು ಕಡ್ಡಿಯೂ ಉಪಯೋಗಕ್ಕೆ ಬರುತ್ತದೆ, ಕಷ್ಟದ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ವರವಾಗಿದ್ದು, ಆಧ್ಯಾತ್ಮ ಬದುಕನ್ನು ತೋರಿಸಿದೆ. ಲೌಕಿಕ ಜೀವನ ಪರಿಶುದ್ಧ ಕಾಯಕ ತಿಳಿಸಿದರೆ, ಅಧ್ಯಾತ್ಮದ ಬದುಕು ಶಾಂತಿ, ನೆಮ್ಮದಿ ತೋರಿಸುತ್ತದೆ ಎಂದು ಗಾಂಧೀಜಿ ಮತ್ತು ರವೀಂದ್ರ ನಾಥ ಠ್ಯಾಗೋರ್ ಅವರ ಮಿತ ಆಹಾರ, ಸರಳ ಜೀವನ ಮತ್ತು ವ್ರತಾಚರಣೆ ಮಾಡಿದ ಬಗ್ಗೆ ವಿವರಿಸಿದರು.
ಪ್ರವಚನಕಾರ ಹೊಳೆಸಿರಿಗೆರೆಯ ಡಿ.ಕೆ ಸಿದ್ದೇಶ್ ಮಾತನಾಡಿ, ಅಂತರಂಗ ಶುದ್ಧವಾ ದಲ್ಲಿ ಭಗವಂತ ಬರುತ್ತಾನೆ. ಧರ್ಮಕಾರ್ಯ ಗಳು ಭವಿಷ್ಯ ದಲ್ಲಿ ಕಾಪಾಡುತ್ತವೆ. ಕಷ್ಟ ಪಟ್ಟಾಗ ದೊಡ್ಡವರಾಗ ಬಹುದು. ಕಷ್ಟಬಂ ದಾಗ ಪರಮಾತ್ಮನನ್ನು ಸ್ಮರಿಸುವುದಲ್ಲ, ಪೂಜೆಯಲ್ಲಿ ಬಳಸುವ ಪತ್ರೆ, ಹೂವು, ನೀರು, ತೆಂಗಿನಕಾಯಿ ಬಳಕೆಗೂ ಒಂದು ಇತಿಹಾಸ- ವಿಜ್ಞಾನ ಇದೆ. ಶಂಖ ಮತ್ತು ಗಂಟೆಗೆ ದುಷ್ಟ ಶಕ್ತಿಯನ್ನು ಓಡಿಸುವ ಶಕ್ತಿ ಇದೆ ಎಂದರು.
ಪ್ರಾಣಿ, ಪಕ್ಷಿಗಳಿಗೆ ಯಾವುದೇ ಆಸೆಗ ಳಿಲ್ಲ, ಮನುಷ್ಯನಿಗೆ ಬಯಕೆಗಳು ಅನೇಕ ಇದ್ದು ತೃಪ್ತಿ ಅಸಾಧ್ಯವಾಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷ ರುದ್ರಗೌಡ, ಉಪಾಧ್ಯಕ್ಷೆ ನಾಗಮ್ಮ, ಸದಸ್ಯೆ ಮಂಜುಳಾ, ಕೆಂಚವೀರಯ್ಯ, ರುದ್ರಪ್ಪ, ಸತೀಶ್, ತಿಮ್ಮಪ್ಪ, ಮಂಜಪ್ಪ, ಕಲಾವಿದ ಮಹಂತೇಶ್, ದಾಸರ ರಾಮಪ್ಪ, ಚಂದ್ರಪ್ಪ, ಸಾರಥಿ ಚಂದ್ರಪ್ಪ, ಎಸ್.ಕೆ.ಮಹಂತೇಶಪ್ಪ, ಮಂಜನಾಥ್, ಗದ್ದಿಗೇಶ್, ಮಲೇಬೆನ್ನೂರು ಯೋಜನಾಧಿ ಕಾರಿ ವಸಂತ್ ದೇವಾಡಿಗ, ಸಂಪನ್ಮೂಲ ವ್ಯಕ್ತಿಗಳಾದ ಸದಾನಂದ, ಮಲ್ಲಿಕಾರ್ಜುನ್, ಅನಂತ್ಕು ಮಾರ್, ಹಾಲಸ್ವಾಮಿ, ಕೊಕ್ಕನೂರು ವಲಯ ಮೇಲ್ವಿಚಾರಕರಾದ ರಂಜಿತಾ, ಹೊಳೆಸಿರಿಗೆರೆ ವಲಯ ಮೇಲ್ವಿಚಾರಕ ರಂಗಸ್ವಾಮಿ, ಕೃಷಿ ಅಧಿಕಾರಿ ಗಂಗಾಧರ, ಸೇವಾ ಪ್ರತಿನಿಧಿಗಳಾದ ಯಶೋಧ, ರಾಮಚಂದ್ರಪ್ಪ, ಕೊಟ್ರೇಶ್, ರೂಪಾ, ಚಂದ್ರಮ್ಮ, ವೀಣಾ, ವಾಣಿ ಮತ್ತು ಇತರರು ಭಾಗವಹಿಸಿದ್ದರು.