ಹರಿಹರ : ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಹರಿಹರ : ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಹರಿಹರ, ನ. 29 – ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಪರಿಷ್ಕೃತ ಆದೇಶದೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆಗ್ರಹಿಸಿ, ಸ್ಥಳೀಯ ಮಾದಿಗ ಸಮಾಜದಿಂದ ಮಂಗಳವಾರ ನಗರದ ತಾಲ್ಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಈ ಹಿಂದೆ  ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದ ಒಳ ಮೀಸಲಾತಿಯ ವರದಿಯಲ್ಲಿ ಕೆಲವು ನ್ಯೂನತೆ ಕಂಡು ಬಂದಿವೆ. ಆ ನ್ಯೂನತೆಗಳನ್ನು ಸರಿಪಡಿಸಿ, ಶೀಘ್ರವೇ ಪರಿಷ್ಕೃತ ವರದಿ ಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ಕೇಂದ್ರಕ್ಕೆ ಸಲ್ಲಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಪಿ.ಹರೀಶ್ ಹಾಗೂ ತಹಶೀಲ್ದಾರ್ ಬಸವರಾಜ್, ಮಾಜಿ ಶಾಸಕ ಎಸ್.ರಾಮಪ್ಪ ಇವರಿಗೆ ಮನವಿ ಸಲ್ಲಿಸಲಾಯಿತು. 

ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್.ಆನಂದ ಕುಮಾರ್, ಪದಾಧಿಕಾರಿಗಳಾದ ಎಲ್.ಬಿ.ಹನುಮಂತಪ್ಪ, ಜಿ.ಹೆಚ್.ಸಿದ್ಧಾರೂಢ, ಎಂ.ಎಸ್.ಶ್ರೀನಿವಾಸ್, ಹನುಮಂತಪ್ಪ ದೊಡ್ಡಮನಿ, ಹೆಚ್. ಶಿವಪ್ಪ, ಹೆಚ್.ಎಂ.ಹನುಮಂತಪ್ಪ, ಬಿ.ಡಿ.ಬಸವರಾಜಪ್ಪ, ಎ.ಪರಶುರಾಮ ಧೂಳೆಹೊಳೆ, ಎ.ಕೆ.ನಾಗೇಂದ್ರಪ್ಪ, ರಾಜನಹಳ್ಳಿ, ಪ್ರಕಾಶ್ ಎನ್.ಕೆ., ಚೌಡಪ್ಪ ಮೇಗಳಮನೆ, ಮುಖಂಡರಾದ ಹೆಚ್.ಮಲ್ಲೇಶ್, ಎಂ.ಬಿ.ಅಣ್ಣಪ್ಪ, ಪಿ.ಜೆ.ಮಹಾಂತೇಶ್, ಡಿ.ಹನುಮಂತಪ್ಪ, ಮಂಜಪ್ಪ ಭಾನುವಳ್ಳಿ, ಸುಭಾಷ್‍ಚಂದ್ರ ಭೋಸ್, ಎ.ಕೆ.ಶಿವರಾಂ, ಬೆಳ್ಳೂಡಿ ಹಾಲೇಶ್, ಮಂಜಪ್ಪ ಗುಳದಹಳ್ಳಿ, ವೈ.ಭಾಗ್ಯದೇವಿ  ಹಾಗೂ ಇತರರಿದ್ದರು.

error: Content is protected !!