ಹರಪನಹಳ್ಳಿ, ನ.28- ವಿಶ್ವಬಂಧು ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಯು.ಬೇವಿನ ಹಳ್ಳಿಯ ಪಿ.ಕೆಂಚನಗೌಡ ಹಾಗೂ ಉಪಾಧ್ಯಕ್ಷ ರಾಗಿ ಹುಣಿಸಿಹಳ್ಳಿಯ ಪ್ರಕಾಶ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಆಡಳಿತ ಮಂಡಳಿಯ ನಿರ್ದೇಶ ಕರಾಗಿ ಚಿಗಟೇರಿಯ ಪಿ.ಪ್ರೇಮಾಕುಮಾರ, ಹರಪನಹಳ್ಳಿಯ ಶೈಲಜಾ ಹೆಚ್.ಗೌರಿಪುರದ, ನ್ಯಾಯವಾದಿ ಬಿ.ವಿ.ಬಸವನಗೌಡ, ಬಾಗಳಿಯ ಆರ್.ಶಿವಕುಮಾರಗೌಡ, ಅಣಿಜಿಗೇರಿಯ ಟಿ.ಮಂಜುನಾಥ, ಕ್ಯಾರಕಟ್ಟೆ ಜಿ.ಕೆ. ಕಿರಣ್ ಕುಮಾರ್, ಡಗ್ಗಿಬಸಾಪುರದ ಗೌಡ್ರು ಯರಿಸ್ವಾಮಿ, ನಂದಿಬೇವೂರಿನ ಎಂ.ಶಶಿಕಲಾರವರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಬ್ಯಾಂಕಿನ ಅಧ್ಯಕ್ಷ-ಉಪಾದ್ಯಕ್ಷ ಹಾಗೂ ನಿರ್ದೇಶಕರಿಗೆ ಮುಖಂಡರಾದ ಪಿ.ಮಹಾಬಲೇಶ್ವರ ಗೌಡ್ರು ಹಾಗೂ ಜಿ.ನಂಜನಗೌಡ್ರು ಅಭಿನಂದಿಸಿದ್ದಾರೆ.