ಸ್ಕೌಟ್ಸ್ – ಗೈಡ್ ನಿಂದ ವೀರ ಯೋಧನಿಗೆ ಶ್ರದ್ಧಾಂಜಲಿ

ಸ್ಕೌಟ್ಸ್  – ಗೈಡ್ ನಿಂದ ವೀರ ಯೋಧನಿಗೆ ಶ್ರದ್ಧಾಂಜಲಿ

ದಾವಣಗೆರೆ, ನ. 28 – ವೀರಮರಣ ಹೊಂದಿದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ ವತಿಯಿಂದ  ನಗರದ ಡಾ. ಎಂ.ಸಿ. ಮೋದಿ ವೃತ್ತದಲ್ಲಿ ದೀಪವನ್ನು ಬೆಳಗಿಸುವ ಮೂಲಕ ವೀರ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಜೆ. ಚಿಗಟೇರಿ, ಜಿಲ್ಲಾ ಆಯುಕ್ತ ಎ.ಪಿ. ಷಡಕ್ಷರಪ್ಪ  ಗೈಡ್ ಆಯುಕ್ತರಾದ ಶಾರದ ಮಾಗಾನಹಳ್ಳಿ, ಸಹಾಯಕ ಜಿಲ್ಲಾ ಆಯುಕ್ತ ಹಾಲಪ್ಪ, ಎನ್.ಕೆ.  ಕೊಟ್ರೇಶ್,  ಜಿಲ್ಲಾ ಕಾರ್ಯದರ್ಶಿ ಎಂ. ರತ್ನ    ಜಂಟಿ ಕಾರ್ಯದರ್ಶಿ ಸುಖವಾಣಿ, ಮಾಜಿ ದೂಡಾ ಅಧ್ಯಕ್ಷ ರಾಜನ ಹಳ್ಳಿ ಶಿವಕುಮಾರ್, ಮಹಾ ನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ನಿಖಿಲ್ ಶೆಟ್ಟಿ, ಪ್ರಣೀತಾ ಗಿರೀಶ್, ಅಶ್ವಿನಿ ಎಸ್.ಜಿ. ವಿ. ಮತ್ತು ಗೈಡ್ ಕ್ಯಾಪ್ಟನ್ ರಜನಿ, ಅನಿತಾ, ಗಾಯತ್ರಿ, ದೀಪಿಕಾ ಹಾಗೂ ಸ್ಕೌಟ್ ಮಾಸ್ಟರ್ಸ್ ಷಡಕ್ಷರಿ ದೇವ, ಹನುಮಂತಪ್ಪ ಉಳ್ಳಾಗಡ್ಡಿ ಮತ್ತು ಯುವ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರವೀಂದ್ರಸ್ವಾಮಿ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.

error: Content is protected !!