ಹರಿಹರದಲ್ಲಿ ಇಂದು ಮಾದಿಗ ಸಮಾಜದ ಧರಣಿ

ಹರಿಹರದಲ್ಲಿ ಇಂದು ಮಾದಿಗ ಸಮಾಜದ ಧರಣಿ

ಹರಿಹರ, ನ, 27- ನಗರದ ಮಾದಿಗ ಸಮಾಜ ತಾಲ್ಲೂಕು ಘಟಕದ ವತಿಯಿಂದ ಮಾದಿಗ ಸಮಾಜದ ಒಳಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ನಾಳೆ ದಿನಾಂಕ 28 ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಾಂಕೇತಿಕ ಧರಣಿ ಮೂಲಕ ಶಾಸಕರಿಗೆ ಮತ್ತು ತಹಶೀಲ್ದಾರ್‌ರವರಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್. ಆನಂದ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಜಾರಿಗೊಳಿಸಬೇಕು. ಹಿಂದುಳಿದ ವರ್ಗಗಳ ಆಯೋಗ ರಚಿಸಿದ್ದ, ಸಾಮಾಜಿಕ ಶೈಕ್ಷಣಿಕ ಜಾತಿ ಗಣತಿಯ ಕಾಂತರಾಜ್ ವರದಿ ಸಿದ್ದವಾಗಿದ್ದು, ಕೂಡಲೇ ಸ್ವೀಕರಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಆದರೆ ಸರ್ಕಾರ ಇದನ್ನು ಮಾಡುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಂಘವು ಪ್ರತಿಯೊಂದು ತಾಲ್ಲೂಕಿನಲ್ಲಿ ಮನವಿಯನ್ನು ಅರ್ಪಿಸುವಂತೆ ಆದೇಶ ಮಾಡಿದ್ದರಿಂದ ದಿ. 28 ರಂದು ಮಂಗಳವಾರ ನಗರದ ಗಾಂಧಿ ವೃತ್ತದಲ್ಲಿ ಸಾಂಕೇತಿಕ ಧರಣಿ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿಯನ್ನು ಅರ್ಪಿಸಲಾಗುತ್ತದೆ.   

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಎಲ್.ಬಿ. ಹನುಮಂತಪ್ಪ, ಹೆಚ್.ಶಿವಪ್ಪ, ಶ್ರೀನಿವಾಸ್, ಸಿದ್ಧಾರೂಡ, ನಾಗೇಂ ದ್ರಪ್ಪ ರಾಜನಹಳ್ಳಿ ಇತರರು ಹಾಜರಿದ್ದರು.

error: Content is protected !!