ದಾವಣಗೆರೆ, ನ.27- ಸಾಣೇಹಳ್ಳಿ ಯಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮ ವೊಂದರ ಸಂದರ್ಭದಲ್ಲಿ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪಡೆದಿರುವ ಮೌಲಾನಾ ಆಜಾದ್ ಅಸೋಸಿಯೇಷನ್ನ ನಿಸಾರ್ ಅಹಮದ್ ಅವರನ್ನು ಸಾಣೇಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕನಕ ಗುರು ಪೀಠದ ಶ್ರೀ ಜಗದ್ಗುರು ನಿರಂಜನಾ ನಂದಪುರಿ ಸ್ವಾಮೀಜಿ, ಸಚಿವ ಹೆಚ್.ಕೆ.ಪಾಟೀಲ್, ಶಾಸಕರಾದ ಎಂ.ಚಂದ್ರಪ್ಪ, ಕೆ.ಎನ್.ನವೀನ್, ಬಿ.ಪಿ.ಹರೀಶ್ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.