ಎಸ್.ಎಸ್.ಕೆ. ಸಮಾಜವು ರಾಜಕೀಯವಾಗಿ ಶಕ್ತಿವಂತವಾಗಲಿ

ಎಸ್.ಎಸ್.ಕೆ. ಸಮಾಜವು ರಾಜಕೀಯವಾಗಿ ಶಕ್ತಿವಂತವಾಗಲಿ

ಹರಿಹರ : ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವದಲ್ಲಿ ಶಶಿಕುಮಾರ್ ಮೆಹರ್ವಾಡೆ

ಹರಿಹರ, ನ.26- ಎಸ್.ಎಸ್.ಕೆ ಸಮಾಜ ಎಲ್ಲಾ ಸಮಾಜದಂತೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿರುವ ಸಮಾಜವಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಶಕ್ತಿವಂತರಾಗಬೇಕಿದೆ ಎಂದು ಎ.ಬಿ.ಎಸ್.ಎಸ್.ಕೆ. ಕಾರ್ಯದರ್ಶಿ ಮತ್ತು ತಪೋವನ ಛೇರ್ಮನ್ ಶಶಿಕುಮಾರ್ ಮೆಹರ್ವಾಡೆ ಆಶಯ ವ್ಯಕ್ತಪಡಿಸಿದರು.

ನಗರದ ದೇವಸ್ಥಾನ ರಸ್ತೆಯ ಸಹಸ್ರಾರ್ಜುನ ವೃತ್ತದಲ್ಲಿ ನಡೆದ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಒಬ್ಬರಿಗೊಬ್ಬರು ಪರಸ್ಪರ ಸಹಕಾರ ಮನೋಭಾವ ಇಟ್ಟುಕೊಂಡು ಸಾಗಿದಾಗ ಒಂದೇ ಕುಟುಂಬದ ಸದಸ್ಯರಂತೆ ಮುಂದೆ ಬರುವುದಕ್ಕೆ ಸಾಧ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಒಂದು ಸಮಾಜವು ಎಲ್ಲಾ ರಂಗದಲ್ಲಿ ಬಲಿಷ್ಠವಾಗಿ ಬೆಳೆಯಬೇಕಾದರೆ, ಸಹಬಾಳ್ವೆ ಮತ್ತು ಉತ್ತಮ ಸಹಕಾರ ಇದ್ದಾಗ ಸಮಾಜ ಒಳ್ಳೆಯ ಸನ್ಮಾರ್ಗದಲ್ಲಿ ಸಾಗುವುದಕ್ಕೆ ದಾರಿಯಾಗುತ್ತದೆ ಎಂದರು. 

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ದೊಡ್ಡ ಹುದ್ದೆ ಅಲಂಕರಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕುವಂತಾಗಲಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಜಿ.ಬಿ. ವಿನಯಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಐಎಎಸ್ ಮತ್ತು ಕೆಎಎಸ್ ಪದವಿಯನ್ನು ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ಕೊಡಿಸಿದಾಗ ಸಮಾಜ ಇನ್ನೂ ಉತ್ತುಂಗದ ಹಾದಿಯಲ್ಲಿ ಸಾಗುವುದಕ್ಕೆ ದಾರಿಯಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಒಗ್ಗ ಟ್ಟಿನಿಂದ ಇದ್ದರೆ ರಾಜಕೀಯ ಶಕ್ತಿ ತನ್ನಿಂದ ತಾನೇ ಬರುತ್ತದೆ  ಎಂದು ಹೇಳಿದರು.

ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ನಾಗರಾಜ್ ಮೆಹರ್ವಾಡೆ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಸಂಜೆ ದೇವಸ್ಥಾನ ರಸ್ತೆಯ ಸಹಸ್ರಾರ್ಜುನ ವೃತ್ತದಲ್ಲಿ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಬೃಹತ್ ಮೆರವಣಿಗೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಠಲ್ ಸಾ ಮೆಹರ್ವಾಡೆ, ರಾಮಕೃಷ್ಣ ಸಾ ಮೆಹರ್ವಾಡೆ, ಸಂದೀಪ್ ಭೂತೆ, ಕೃಷ್ಣಸಾ ಆರ್.ಪೂಜಾರಿ, ರಾಮಚಂದ್ರಸಾ ಕಬಾಡೆ, ಗಿರೀಶ್ ಟಿ.ಭೂತೆ, ಪರಶುರಾಮ್ ಕಾಟ್ವೆ, ರಮೇಶ್ ಕಾಟ್ವೆ, ಸುಲೋಚನ ಮೆಹರ್ವಾಡೆ, ನಾಗೇಂದ್ರ ಸಾ ಕಾಟ್ವೆ, ರುಕ್ಮಿಣಿ ಬಾಯಿ ಮೆಹರ್ವಾಡೆ, ಶೋಭಾಬಾಯಿ ಭೂತೆ, ಉಷಾ ಅಂಬಾಸಾ ಪಿ ಮೆಹರ್ವಾಡೆ, ಮೋಹನ್ ಎನ್.ಕಿರೋಜಿ,  ದತ್ತುಸಾ ರಾಜೊಳ್ಳಿ, ತುಳಜಪ್ಪ ಭೂತೆ, ಕಿರಣ್ ಭೂತೆ, ಅಶೋಕ ಭೂತೆ, ರಾಜು ಪವರ್, ಮೋತಿಲಾಲ್ ಕಿರೋಜಿ, ರಾಜು ಕಿರೋಜಿ, ರಾಘವೇಂದ್ರ ಆರ್.ಮೆಹರ್ವಾಡೆ, ಪ್ರಶಾಂತ್ ಟಿ ಭೂತೆ, ಕೃಷ್ಣ ಪಿ ರಾಜೊಳ್ಳಿ ಅನಿಲ್ ಇತರರು ಹಾಜರಿದ್ದರು.  

error: Content is protected !!