ದಾವಣಗೆರೆ, ನ.24- ವಿಶ್ವ ಕ.ರ.ವೇ.ಯ ಕಛೇರಿಯಲ್ಲಿ 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಕನ್ನಡ ಧ್ವಜವನ್ನು ಹಿರಿಯ ಪತ್ರಕರ್ತ ಎಲ್. ತಾರಾನಾಥ್ ನೆರವೇರಿಸಿ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಎಲ್ಲರೂ ಕಾಳಜಿ ವಹಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡಲು ಕರೆ ನೀಡಿದರು .
ದಾವಣಗೆರೆ ಉದ್ಯಾನವನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು ಮಾತನಾಡಿದರು. ವಿಶ್ವ ಕ.ರ.ವೇಯ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ಉಪಾಧ್ಯಕ್ಷ ಮಹಬೂಬ್ ಅಮ್ಜದ್ ಆಲಿ, ಎಂ. ರವಿ, ಸಂತೋಷ್, ಬಾಬುರಾವ್, ಚಂದ್ರಶೇಖರ್, ರಂಗನಾಥ್, ಗಿರೀಶ್, ಮಹಾಲಿಂಗಪ್ಪ, ಹನುಮೇಶ್, ರವಿಕುಮಾರ್, ನಾಗಭೂಷಣ್, ನಾಡಿಗೇರ್, ವಿಶ್ವನಾಥ್, ಮಲ್ಲೇಶ್, ಲಕ್ಷ್ಮಣರಾವ್, ಫಾರೂಕ್ ಮುಂತಾದವರು ಇದ್ದರು