ನಮೋ ಬ್ರಿಗೇಡ್ ದಾವಣಗೆರೆ ವತಿಯಿಂದ ಮೂರು ದಿನಗಳ ಕಾಲ ಸರಣಿ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು, ‘ಇನ್ನೂ ಮಲಗಿದರೆ, ಏಳುವಾಗ ಭಾರತ ವಿರುವುದಿಲ್ಲ!’ ಎಂಬ ಶೀರ್ಷಿಕೆಯಡಿ ಚಿಂತಕ ಯುವಾ ಬ್ರಿಗೇಡ್ ಸಂಸ್ಥಾ ಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ. ಇಂದಿನಿಂದ 3 ದಿನ ಪ್ರತಿದಿನ ಸಂಜೆ 6-15 ರಿಂದ 8 ರವರೆಗೆ ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾ ಗಿದೆ. ಚಕ್ರವರ್ತಿ ಸೂಲಿಬೆಲೆಯವರು ಉಪನ್ಯಾಸ ಮಾಲಿಕೆ ಮೂಲಕ ಭಾರತ ಭಂಜನೆಯ ಷಡ್ಯಂತ್ರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದು ರಾಜ್ಯ ಸಂಚಾ ಲಕ ಶಾರದಾ ಡೈಮಂಡ್ ಮತ್ತು ಜಿಲ್ಲಾ ಸಂಚಾಲಕ ಚಂದ್ರಮೋಹನ್ ತಿಳಿಸಿದ್ದಾರೆ.
January 11, 2025