ದಾವಣಗೆರೆ, ನ. 24 – ಶ್ರೀ ಭಗವಾನ್ ಮಹಾವೀರ್ ಜೈನ್ ಹಾಸ್ಪಿಟಲ್ ವತಿಯಿಂದ ನಾಡಿದ್ದು ದಿನಾಂಕ 26ರ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆಯನ್ನು ಶ್ರೀ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನಡೆಸಲಾಗುವುದು.
ತಜ್ಞ ವೈದ್ಯರಾದ ಡಾ. ಅಭಿಮಾನ್ ಎನ್. ಹಾಗೂ ಡಾ. ಯತೀಶ್ ಹೆಚ್.ಎಂ. ಅವರು ಆರೋಗ್ಯ ತಪಾಸಣೆ ನಡೆಸುವರು. ವಿವರಕ್ಕೆ ಸಂಪರ್ಕಿಸಿ : 08192-470872, 9606048421, 96060 48422.