ಕೊಟ್ಟೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್ ತಿಳಿಸಿದ್ದಾರೆ.
ಡಾ.ಎಚ್.ಜಿ.ರಾಜ್ ಭವನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಸಿದ್ಧರಾಮ ಕಲ್ಮಠ ಉದ್ಘಾಟಿಸುವರು. ಹ.ಬೊ.ಹಳ್ಳಿಯ ಉಪನ್ಯಾಸಕ ಅಕ್ಕಿ ಬಸವೇಶ ಅವರು, ಕನ್ನಡ ನಾಡು ನುಡಿ ಹಾಗೂ ಕರ್ನಾಟಕ ನಾಮಕರಣದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸುವರು.
ತಹಶೀಲ್ದಾರ್ ಜಿಕೆ ಅಮರೇಶ, ಕಲಾಕೇಂದ್ರ ಅಧ್ಯಕ್ಷ ಎಂಎಜೆ ಸತ್ಯಪ್ರಕಾಶ, ಜಿಪಂ ಮಾಜಿ ಸದಸ್ಯ ಎಂಎಜೆ ಹರ್ಷವರ್ಧನ ಇತರರು ಅತಿಥಿಗಳಾಗಿ ಆಗಮಿಸುವರು. ಕಾರ್ಯಕ್ರಮಕ್ಕೂ ಮೊದಲು ನಡೆಯುವ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಬಿಇಒ ಪದ್ಮನಾಭ ಕರಣಂ, ವರ್ತಕ ಪಿ.ಶ್ರೀಧರಶೆಟ್ಟಿ ಚಾಲನೆ ನೀಡುವರು ಎಂದು ತಿಳಿಸಿದ್ದಾರೆ.