ಹರಿಹರದಲ್ಲಿ 26 ರಂದು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಮೂಲ ಪುರುಷರ ಜಯಂತ್ಯೋತ್ಸವ

ಹರಿಹರದಲ್ಲಿ 26 ರಂದು ಸೋಮವಂಶ ಸಹಸ್ರಾರ್ಜುನ  ಕ್ಷತ್ರಿಯ ಸಮಾಜದ ಮೂಲ ಪುರುಷರ ಜಯಂತ್ಯೋತ್ಸವ

ಹರಿಹರ, ನ.23- ನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಇದೇ ದಿನಾಂಕ 26 ರ ಭಾನುವಾರ ಸಮಾಜದ ಮೂಲ ಪುರುಷರಾದ ಶ್ರೀ ರಾಜರಾಜೇಶ್ವರ ರಘು ತಿಲಕ ಕಾರ್ತು ವೀರ್ಯಾರ್ಜುನ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವ   ನಡೆಸಲಾಗುವುದು ಎಂದು ಸಮಾಜದ ಅಧ್ಯಕ್ಷ ಎನ್.ನಾಗರಾಜ್ ಮೆಹರ್ವಾಡೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ನೆರವೇರಿಸಲಾಗುವುದು. ಶ್ರೀಮತಿ ಕಸ್ತೂರಿಬಾಯಿ ಆರ್.ಪೂಜಾರಿ ಮತ್ತು ಕೃಷ್ಣಸಾ ಆರ್.ಪೂಜಾರಿ ಗುತ್ತೂರು ಇವರಿಂದ ಉಪಹಾರ ಸೇವೆ, ಬೆಳಗ್ಗೆ 9 ಗಂಟೆಗೆ ಎಸ್.ಎಸ್.ಕೆ. ಯುವ ಗಜ ಪಡೆ ವತಿಯಿಂದ ಶ್ರೀಮತಿ ಯಲ್ಲಮ್ಮ ತುಳಜಣಸಾ ಭೂತೆ ಸಮುದಾಯ ಭವನದಲ್ಲಿ ಸಹಸ್ರಾರ್ಜುನ ಮಹಾರಾಜರ ಧ್ವಜಾರೋಹಣ, ಬೆಳಗ್ಗೆ 10 ಗಂಟೆಗೆ ಶ್ರೀ ವಿಠ್ಠಲ – ರುಕ್ಮಿಣಿ ದೇವಸ್ಥಾನ ಆವರಣದಲ್ಲಿ ಬೃಹತ್ ಬೈಕ್ ರಾಲಿಗೆ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷರಿಂದ ಚಾಲನೆ ನೀಡಲಾಗುವುದು. 

ಅಂದು ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಣೆ, ಸಂಜೆ 4 ಗಂಟೆಗೆ ವಿವಿಧ ಜಾನಪದ ಕಲಾ ಮೇಳಗಳೊಂದಿಗೆ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಮೆರವಣಿಗೆ, ಸಂಜೆ 7 ಗಂಟೆಗೆ ದೇವಸ್ಥಾನ ರಸ್ತೆಯ ಸಹಸ್ರಾರ್ಜುನ ವೃತ್ತದಲ್ಲಿ ವೇದಿಕೆಯ ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಎನ್. ನಾಗರಾಜ್ ಮೆಹರ್ವಾಡೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಎ.ಬಿ.ಎಸ್.ಕೆ. ಕಾರ್ಯದರ್ಶಿ ಡಾ.ಶಶಿಕುಮಾರ್ ವಿ.ಮೆಹರ್ವಾಡೆ ಮಾಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಹೆಚ್.ಎಸ್.ಶಿವಶಂಕರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ವಿನಯಕುಮಾರ್ ಕಕ್ಕರಗೊಳ್ಳ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಹುಬ್ಬಳ್ಳಿ ಕೈಗಾರಿಕೋದ್ಯಮಿಗಳಾದ ಅರ್ಜುನ್ ಸಾ ಪವಾರ್, ವಿನಯ ಕೆ.ಪವಾರ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಮೋಹನ್ ಎನ್.ಖಿರೋಜಿ, ಪರಶುರಾಮ್ ಕಾಟ್ವೆ, ಪ್ರಧಾನ ಕಾರ್ಯದರ್ಶಿ ಅಂಬಾಸಾ ಪಿ.ಮೆಹರ್ವಾಡೆ, ಖಜಾಂಚಿ ತುಳಜಪ್ಪ ಎನ್.ಭೂತೆ, ನಿರ್ದೇಶಕರಾದ ಕೃಷ್ಣ ಸಾ ಆರ್.ಪೂಜಾರಿ, ಅಶೋಕ ಭೂತೆ, ಶ್ರೀಕಾಂತ್ ಮೆಹರ್ವಾಡೆ, ಮೋಹನ್ ಸಾ, ಕೃಷ್ಣ ಸಾ ಲದ್ವಾ, ಕೃಷ್ಣ ಪಿ.ರಾಜೋಳ್ಳಿ ಇತರರು ಹಾಜರಿದ್ದರು.

error: Content is protected !!