ಜಗಳೂರು, ನ.23- ಜಗಳೂರು ತಾಲ್ಲೂಕಿನ ಗ್ರಾ.ಪಂ.ಗಳ ಒಕ್ಕೂಟದ ಸಭೆಯನ್ನು ಮಂಗಳವಾರ ನಡೆಸಲಾಯಿತು. ಸಭೆಯಲ್ಲಿ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಬಿ.ವಿ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಾತಿ ಡಿ.ಆರ್ ವೀರೇಶ್, ಉಪಾಧ್ಯಕ್ಷರಾದ ಅಜುಂ ಉಲ್ಲಾ, ತಾ. ಉಪಾಧ್ಯಕ್ಷ ಯೋಗಾನಂದ ಬಂಗಾರಪ್ಪ, ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗಮ್ಮ, ಕಾನೂನು ಸಲಹೆಗಾರ ಟಿ.ಒಬಯ್ಯ ಹಾಗೂ ಇನ್ನೂ ಅನೇಕ ಗ್ರಾಮ ಪಂಚಾಯತಿಗಳ ಸದಸ್ಯರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಮುಂಬರುವ ದಿನಗಳಲ್ಲಿ ತಿಂಗಳಿಗೊಮ್ಮೆ ತಾಲ್ಲೂಕಿನ ಸಭೆ ಕರೆದು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿನ ನ್ಯೂನ್ಯತೆಗಳ ಬಗ್ಗೆ ಚರ್ಚಿಸಿ, ಸಂಘಟನಾತ್ಮಕ ದೃಷ್ಟಿಯಿಂದ ಒಕ್ಕೂಟವನ್ನು ಬಲಗೊಳಿಸಲು ಎಲ್ಲಾ ಪಂಚಾಯಿತಿಯಿಂದ (22 ಪಂಚಾಯಿತಿ) ಕನಿಷ್ಠ ಒಬ್ಬ ಸದಸ್ಯರನ್ನು ಒಕ್ಕೂಟಕ್ಕೆ ಜೋಡಿಸುವ ನಿರ್ಣಯ ಕೈಗೊಳ್ಳಲಾಯಿತು.