ದಾವಣಗೆರೆ, ನ.22- ಪಂಚಮಸಾಲಿ ಸಮಾಜದಿಂದ ನಡೆಸುವ ಕನ್ನಡ ರಾಜ್ಯೋತ್ಸವ ಮತ್ತು ಕಿತ್ತೂರು ರಾಣಿ ಚನ್ನಮ್ಮನ ಜಯಂತ್ಯುತ್ಸವದ ನಿಮಿತ್ಯ ಸಮಾಜದ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ದಿನಾಂಕ 25ರ ಶನಿವಾರ ಸಂಜೆ 6 ಗಂಟೆಯಿಂದ ನಡೆಯಲಿರುವ `ಕನ್ನಡ ರಾಜ್ಯೋತ್ಸವ’ ಹಾಗೂ `ಕಿತ್ತೂರು ರಾಣಿ ಚನ್ನಮ್ಮನ ಜಯಂತ್ಯೋತ್ಸವ’ಹಾಗೂ `ಮಕ್ಕಳ ದಿನಾಚರಣೆ’ ನಿಮಿತ್ತ್ಯ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸ್ಪರ್ಧೆಗಳು ನಡೆಯಲಿವೆ.
8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವೀರ ರಾಣಿ ಕಿತ್ತೂರು ಚನ್ನಮ್ಮನ ಕುರಿತು ಪ್ರಬಂಧ ಸ್ಪರ್ಧೆ. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಶುಭಾ ಷಣ ಸ್ಪರ್ಧೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ನೆನಪಿನ ಸಾಮರ್ಥ್ಯ ಪರೀಕ್ಷೆ ಹಾಗೂ ಕನ್ನಡ ಶಬ್ದ ಬರಹ ಸ್ಪರ್ಧೆ. ಮಕ್ಕಳು ಮತ್ತು ಮಹಿಳೆಯರಿಗೆ ಮ್ಯೂಜಿಕಲ್ ಚೇರ್ ಸ್ಪರ್ಧೆ ನಡೆಸಲಾಗುತ್ತದೆ.
ಸ್ವರ್ಧೆಯಲ್ಲಿ ಭಾಗವಹಿಸುವವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಸಮಾಜದ ಕಛೇರಿಗೆ ಬಂದು ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ಮೊ. 9880335422 (ಕೆ.ಶಿವಕುಮಾರ್), 9448533713 (ಕಾಶಿನಾಥ್), 9242134700 (ಬಸವರಾಜ್) ಇವರನ್ನು ಸಂಪರ್ಕಿಸಬಹುದು.