ದಾವಣಗೆರೆ, ನ.22- ಬೈಕ್ಗೆ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಲಕ್ಕಮುತ್ತೇನಹಳ್ಳಿ ಸಮೀಪದ ಎನ್.ಹೆಚ್.48 ರಸ್ತೆ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕಂದನಕೋವಿ ಗ್ರಾಮದ ಮನು (26) ಹಾಗೂ ಅಣ್ಣೇಶಿ (26) ಮೃತಪಟ್ಟ ಯುವಕರು. ಇವರಿಬ್ಬರೂ ಪಲ್ಸರ್ ಬೈಕ್ನಲ್ಲಿ ಅಡಿಕೆ ಕೆಲಸಕ್ಕೆಂದು ಅಂದು ಬೆಳಿಗ್ಗೆ ಭರಮಸಾಗರಕ್ಕೆ ಹೋಗಿ ಸಂಜೆ ವಾಪಸ್ ಮರಳುವಾಗ ಈ ಘಟನೆ ನಡೆದಿದೆ.
ಮನು ಸ್ಥಳದಲ್ಲಿಯೇ ಮೃತಟ್ಟರೆ, ಅಣ್ಣೇಶಿ ಆಸ್ಪತ್ರೆಯಲ್ಲಿ ಮೃತಪ ಟ್ಟಿದ್ದಾರೆ. ಬಸ್ನಲ್ಲಿದ್ದ ಹತ್ತು ಜನರಿಗೆ ಗಾಯಗಳಾಗಿವೆ. ಈ ಕುರಿತು ಕೆ.ಎಂ. ಮಂಜುನಾಥ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.