ಕನ್ನಡದ ಬಗ್ಗೆ ವಿದ್ಯಾರ್ಥಿಗಳು ಅಭಿಮಾನ ಹೊಂದಬೇಕು

ಕನ್ನಡದ ಬಗ್ಗೆ ವಿದ್ಯಾರ್ಥಿಗಳು ಅಭಿಮಾನ ಹೊಂದಬೇಕು

ಹರಿಹರ : ಕವಿಗೋಷ್ಠಿಯಲ್ಲಿ ಕನ್ನಡ ಪರ ಹೋರಾಟಗಾರ ಹೆಚ್. ಸುಧಾಕರ್

ಹರಿಹರ,ನ.22-  ನಗರದ ಎಸ್.ಜೆ.ವಿ.ಪಿ ಪದವಿ ಕಾಲೇಜ್‌ ಮತ್ತು ಚುಟುಕು ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲಾ ಘಟಕದ  ಆಶ್ರಯದಲ್ಲಿ ಶ್ರೀಶೈಲ ಜಗದ್ಗುರುಗಳವರ ಜನ್ಮದಿನ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಕನ್ನಡ ಪರ ಹೋರಾಟಗಾರ ಹೆಚ್. ಸುಧಾಕರ್  ಕಾರ್ಯಕ್ರಮವನ್ನು   ಉದ್ಘಾಟಿಸಿ ಮಾತನಾಡಿ,  ಇಂದಿನ ವಿದ್ಯಾರ್ಥಿಗಳು  ಕನ್ನಡದ ಬಗ್ಗೆ ಹೆಚ್ಚು ಅಭಿಮಾನವನ್ನು ಹೊಂದಬೇಕು ಎಂದು ತಿಳಿಸಿ, ನಾನು ಓದಿದ ಸಂಸ್ಥೆಯು ಇಂದು ಅನೇಕ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ನಮ್ಮ ತಾಲ್ಲೂಕಿನಲ್ಲಿ ಉತ್ತಮವಾಗಿ ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು. 

ಸಂಸ್ಥೆಯ ಉಪಾಧ್ಯಕ್ಷ  ಡಿ.ಎಂ ಹಾಲಸ್ವಾಮಿ, ನಿರ್ದೇಶಕರಾದ ಡಿ.ಜಿ.ಶಿವಾನಂದಪ್ಪ,
ಎನ್.ಹೆಚ್.ಪಾಟೀಲ್, ಪದವಿ ಕಾಲೇಜಿನ ಉಪನ್ಯಾಸಕ ವೀರಣ್ಣ ಬಿ.ಶೆಟ್ಟರ್, ಶಿವಯೋಗಿ ಹಿರೇಮಠ, ಶ್ರೀಮತಿ ರತ್ನಮ್ಮ ಸಾಲಿಮಠ ಉಪಸ್ಥಿತರಿದ್ದರು. 

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಜಿ.ಎಚ್. ರಾಜಶೇಖರ ಗುಂಡುಗತ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 140 ಕ್ಕೂ ಹೆಚ್ಚಿನ ಕವಿಗಳು ತಮ್ಮ ಕವನಗಳನ್ನು ವಾಚನ ಮಾಡಿದರು.

error: Content is protected !!