ದಾವಣಗೆರೆ, ನ. 21 – ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸಿ.ವಿ. ರಾಮನ್ ಕಾಲೇಜು ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನಡೆದ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ ಸಿ ವಿ ರಾಮನ್ ಕಾಲೇಜಿನ ಪ್ರಾಂಶುಪಾಲರಾದ ಸಿ. ಎನ್. ಪ್ರಶಾಂತ್, ಉಪಪ್ರಾಂಶುಪಾಲ ಅರುಣ್ ಕುಮಾರ್, ಸಿಬ್ಬಂದಿಗಳು ಇದ್ದರು. ಹೆಚ್ಡಿಎಫ್ಸಿ ಬ್ಯಾಂಕ್ನ ಸಿಬ್ಬಂದಿಗಳಾದ ರಾಜೇಶ್ ಭಾಸ್ಕರ್ ಶೆಟ್ಟಿ, ರಾಘವೇಂದ್ರ ಇದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಆನಂದ್ ಜ್ಯೋತಿ, ನಿರ್ದೇಶಕ ಶಿವಾನಂದ್, ರವಿಕುಮಾರ್, ವೈದ್ಯಾಧಿಕಾರಿಗಳಾದ ಡಾ. ಪಿ. ಕೆ. ಬಸವರಾಜ್, ಸಂಯೋಜಕ ಎನ್. ಜಿ. ಶಿವಕುಮಾರ್, ಸಿಬ್ಬಂದಿಗಳಾದ ಗಿರೀಶ್, ಜ್ಯೋತಿ, ಪದ್ಮ ಇತರರು ಹಾಜರಿದ್ದರು.