ಕಸಾಪ ಅಧ್ಯಕ್ಷರಾಗಿ 2 ವರ್ಷ ಪೂರೈಸಿದ ವಾಮದೇವಪ್ಪ

ಕಸಾಪ ಅಧ್ಯಕ್ಷರಾಗಿ 2 ವರ್ಷ ಪೂರೈಸಿದ ವಾಮದೇವಪ್ಪ

ದಾವಣಗೆರೆ, ನ. 21 – ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾರ್ಥಕ ಎರಡು ವರ್ಷಗಳನ್ನು ಪೂರೈಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ  ಬಿ.ವಾಮದೇವಪ್ಪ ಅವರನ್ನು ಕುವೆಂಪು ಕನ್ನಡ ಭವನದಲ್ಲಿ ಅವರ ಅಭಿಮಾನಿ ಮಿತ್ರರು  ಗೌರವಿಸಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ  ಮಾತನಾಡಿದ ಬಿ.ವಾಮದೇವಪ್ಪ ಅವರು, ತಮ್ಮ ಸೇವಾವಧಿಯ ಎರಡು ವರ್ಷಗಳಲ್ಲಿ ಎರಡು ಜಿಲ್ಲಾ ಸಮ್ಮೇಳನ ಹಾಗೂ ಐದು ತಾಲ್ಲೂಕು ಸಮ್ಮೇಳನಗಳನ್ನು ಗ್ರಾಮೀಣ ಪ್ರದೇಶ ಗಳಲ್ಲಿ   ಯಶಸ್ವಿಯಾಗಿ ನಡೆಸಿದ್ದೇವೆ. ಹಾಗೆಯೇ ನೂರಾರು ಸಂಖ್ಯೆಯಲ್ಲಿ ಕನ್ನಡದ ಕಾರ್ಯಕ್ರಮಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜನೆಗೊಂಡಿವೆ. ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ  27 ಪುಸ್ತಕಗಳೂ ಬಿಡುಗಡೆಗೊಂಡಿವೆ. ಇನ್ನು ಬಾಕಿಯಿರುವ ಮೂರು ವರ್ಷಗಳ ಅವಧಿಯಲ್ಲಿ ಕನ್ನಡದ ತೇರನ್ನು ಜಿಲ್ಲೆಯಾದ್ಯಂತ ಎಳೆದು ಕನ್ನಡ ನುಡಿಯ ಕಂಪನ್ನು ಪಸರಿಸಿ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯ ಆಶಯ ನನ್ನದಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಕೆನರಾ ಬ್ಯಾಂಕಿನ ಆರ್.ಆಂಜನೇಯ, ವಿದ್ಯುತ್ ಗುತ್ತಿಗೆದಾರರ ಸಂಘದ ಜಿ.ಎಮ್.ಶಿವ ಕುಮಾರ್, ಎ.ಪರಮೇಶ್ವರಪ್ಪ. ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿವಿಯ ವಿದ್ಯಾನಗರ  ಶಾಖೆಯ ಸಂಚಾಲಕರಾದ ಬ್ರಹ್ಮಾಕುಮಾರಿ ಗೀತಾ, ಹಾಲಪ್ಪ, ಗುಡ್ಡಪ್ಪ, ಗುರುರಾಜ್ ಕರೇಗೌಡ್ರು ಕೆಂಚವೀರಪ್ಪ, ಶಂಕ್ರಯ್ಯ, ಸವಿತಾ, ಸುಧಾರಾಣಿ ವತ್ಸಲ ಇನ್ನೂ ಮುಂತಾ ದವರು ವಾಮದೇವಪ್ಪ ಅವರನ್ನು ಅಭಿನಂದಿಸಿದರು.

error: Content is protected !!