ಪ್ರತಿಭಾ ಪುರಸ್ಕಾರದ ಹಣ ಸದುಪಯೋಗಕ್ಕೆ ಕರೆ

ಪ್ರತಿಭಾ ಪುರಸ್ಕಾರದ ಹಣ ಸದುಪಯೋಗಕ್ಕೆ ಕರೆ

ಹರಳೆಣ್ಣೆ ಕೊಟ್ರಬಸಪ್ಪ ಟ್ರಸ್ಟ್‌ನ ಕಾರ್ಯಕ್ರಮದಲ್ಲಿ ಎಚ್.ಕೆ. ಮಂಜುನಾಥ್

ದಾವಣಗೆರೆ, ನ.20- ನಗರದ ಹರಳೆಣ್ಣೆ ಕೊಟ್ರಬಸಪ್ಪ ಎಜುಕೇಷ ನಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ   ಪ್ರತಿಭಾ ಪುರಸ್ಕಾರ ಸಮಾರಂಭವನ್ನು  ಹದಡಿ ರಸ್ತೆಯಲ್ಲಿರುವ  ಎಸ್ ಎಂ ಆರ್ ಎಸ್ ಐ ಎಸ್ ಎಮ್  ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಳಣ್ಣೆ ಕೊಟ್ರಬಸಪ್ಪ ಪುತ್ರ  ಎಚ್.ಕೆ. ಮಂಜುನಾಥ್  ಮಾತನಾಡಿ,  ವಿದ್ಯಾರ್ಥಿಗಳು  ನಮ್ಮ ಟ್ರಸ್ಟ್ ಕೊಡುವ ಪ್ರತಿಭಾ ಪುರಸ್ಕಾರದ ಹಣವನ್ನು   ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿ ಹೇಳಿದರು 

ಮುಖ್ಯ ಅತಿಥಿಯಾಗಿ  ಆಗಮಿಸಿದ್ದ ಹಿರಿಯ ಪತ್ರಕರ್ತ ಬಿ. ಎನ್. ಮಲ್ಲೇಶ್ ಮಾತನಾಡಿ, ಹರಳೆಣ್ಣೆ ಕೊಟ್ರಬಸಪ್ಪನವರ ಸೇವಾ ಮನೋಧರ್ಮವನ್ನು ಶ್ಲಾಘಿಸಿ, ಇಂದಿಗೂ ಸಹ ಅವರ ಕುಟುಂಬವು ಹೇಗೆ ಆ ಸೇವಾ ಸಂಸ್ಕಾರವನ್ನು ಮುನ್ನಡೆಸಿಕೊಂಡು ಬಂದಿದೆ ಎಂದು ವಿವರಿಸಿದರು. 

ಮುದೇಗೌಡ್ರು ರೇವಣಸಿದ್ದಪ್ಪ  ಸ್ಕೂಲ್ ಆಫ್  ಇನ್ಫಾರ್ಮೇಷನ್ ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜ್‌ನ   ಪ್ರಾಂಶುಪಾಲ ಮುನವಳ್ಳಿ ಮಠ ಅವರು ಫಲಾನುಭವಿ ವಿದ್ಯಾರ್ಥಿಗಳನ್ನು  ಕುರಿತು ಮಾತನಾಡಿ, ತಾವು ಪಡೆದಿರುವ ವಿದ್ಯಾರ್ಥಿ ವೇತನವು ಸಾರ್ಥಕವಾಗು ವಂತೆ ಜೀವನವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು. 

ಕಾಲೇಜಿನ ಕನ್ನಡ  ಪ್ರಾಧ್ಯಾಪಕ  ಮಾರುತಿ ಶಾಲೆಮನೆ  ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಿಸಿಎ ತರಗತಿ ವಿಭಾಗದ ಮುಖ್ಯಸ್ಥ  ಪ್ರಶಾಂತ್ ಸಿ. ಪಟೇಲ್ ಅವರನ್ನು ಟ್ರಸ್ಟ್  ವತಿಯಿಂದ ಸನ್ಮಾನಿಸಲಾಯಿತು.  

ಹರಳೆಣ್ಣೆ ಕೊಟ್ರಬಸಪ್ಪ  ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ  ಉಪಹಾರದ ವ್ಯವಸ್ಥೆ  ಮಾಡಿ, ಧನ ದಾನದೊಂದಿಗೆ ಅನ್ನದಾನ ವನ್ನೂ ಮಾಡುವ ಮೂಲಕ ತಮ್ಮ ಕುಟುಂಬದ ಸಂಸ್ಕಾರವನ್ನು ಇನ್ನೂ ಎತ್ತರಕ್ಕೇರಿಸಿದರು.

error: Content is protected !!