ಹೊನ್ನಾಳಿ, ನ. 16 – ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ನಾಳೆ ದಿನಾಂಕ 17ರ ಶುಕ್ರವಾರದಿಂದ ಎರಡು ದಿನಗಳವರೆಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಜಿ. ಧನಂಜಯ ತಿಳಿಸಿರುವರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜ್‌ಗಳ 25 ತಂಡಗಳು ಕ್ರೀಡಾಕೂಟಕ್ಕೆ ನೋಂದಣಿಗೊಂಡಿದ್ದು. ಇನ್ನು 10 ತಂಡಗಳು ನೋಂದಣಿಗೊಳ್ಳುವ ನಿರೀಕ್ಷೆಯಲ್ಲಿದ್ದು. 40 ಜನ ದೈಹಿಕ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟವನ್ನು ಶಾಸಕ ಶಾಂತನಗೌಡ ಉದ್ಘಾಟಿಸಲಿದ್ದು, ದೈಹಿಕ ಶಿ. ನಿರ್ದೇಶಕ ವೆಂಕಟೇಶ, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಇಮ್ತಿಯಾಜ್ ಕ್ರೀಡಾಧಿಕಾರಿ ವೀರಪ್ಪ, ಸಹಪ್ರಾದ್ಯಾಪಕ ಡಿ.ಸಿ. ಪಾಟೀಲ, ಹರೀಶ್ ಉಪಸ್ಥಿತರಿರುವರೆಂದರು. ಪತ್ರಿಕಾ ಗೋಷ್ಠಿಯಲ್ಲಿ ಮಂಜುನಾಥ ಗುರು, ಡಿ.ಸಿ. ಪಾಟೀಲ, ಪಿ.ಎಸ್. ಹರೀಶ್, ಕೊಟ್ರೇಶ್, ಅಮೂಲ್ಯ, ಗೀತಾ ಉಪಸ್ಥಿತರಿದ್ದರು.