ಮಹನೀಯರ ವಿಷಯಗಳನ್ನು ಪಠ್ಯದಿಂದ ಕೈಬಿಡಬಾರದು

ಮಹನೀಯರ ವಿಷಯಗಳನ್ನು ಪಠ್ಯದಿಂದ ಕೈಬಿಡಬಾರದು

ಹೊನ್ನಾಳಿ ಶಾಸಕ ಶಾಂತನಗೌಡ

ಹೊನ್ನಾಳಿ, ನ.16- ಚಿತ್ರದು ರ್ಗದ ಮದಕರಿ ನಾಯಕರ ಆಳ್ವಿಕೆ ಯಲ್ಲಿ ಕೋಟೆ ಕಾವಲು ಕಾಯುವ ವೀರ ಯೋಧನ ಮಡದಿಯಾಗಿ, ವೈರಿ ಪಡೆ ಕೋಟೆಯೊಳಗೆ ನುಸುಳುವುದನ್ನು ಕಂಡು ತಾನು ಒನಕೆಯನ್ನೇ ಆಯುಧವನ್ನಾಗಿಸಿ ಕೊಂಡು ವೈರಿ ಪಡೆಯ ಸೈನಿಕರ ರುಂಡಗಳನ್ನು ಚಂಡಾಡಿ, ವೀರ ಮಹಿಳೆ ಎನ್ನಿಸಿಕೊಳ್ಳುವ ಜೊತೆಗೆ ಭೋಜನಕ್ಕೆ ಕುಳಿತಿದ್ದ ಪತಿಗೆ ತೊಂದರೆ ಕೊಡದೇ ಪತಿ ಧರ್ಮ ಪರಿಪಾಲಿಸಿ ವೀರ ಮತ್ತು ಸಾತ್ವಿಕ ಮಹಿಳೆಯಾಗಿ ವೀರ ವನಿತೆ ಒನಕೆ ಓಬವ್ವ ನಾಡಿನ ಜನತೆ ಸದಾ ಸ್ಮರಿಸುವಂತಾಗಿದ್ದಾಳೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. 

ತಾಲ್ಲೂಕು ಕಚೇರಿ ಸಭಾಂಗ ಣದಲ್ಲಿ ಶನಿವಾರ ಆಯೋಜಿಸ ಲಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪಠ್ಯಪುಸ್ತಕಗಳಲ್ಲೂ ಕೂಡ ಇಂತಹ ಮಹನೀಯರ ಪಾಠಗಳನ್ನು  ಹೆಚ್ಚು ಹೆಚ್ಚು ಸೇರಿಸಬೇಕು. ಈ ಬಗ್ಗೆ ತಾನೂ ಕೂಡ ಸರ್ಕಾರದ ಗಮನಕ್ಕೆ ತರುತ್ತೇನೆ. ಕೆಲವೊಂದು ಮಹನೀ ಯರ ವಿಷಯಗಳನ್ನು ಪಠ್ಯ ಪುಸ್ತಕ ದಿಂದ ಕೈಬಿಡಲಾಗುತ್ತಿ ರುವುದು ತಪ್ಪು. ಪ್ರೌಢಶಾಲೆಯ ಹಂತದವ ರೆಗೂ ವಿದ್ಯಾರ್ಥಿಗಳಿಗೆ ಜಯಂತಿ ಆಚರಿಸುವ ಮಹನೀಯರ ಇತಿಹಾಸ ತಿಳಿಸುವುದು  ಅವಶ್ಯಕವೆಂದರು.

ಸಭೆಯಲ್ಲಿ ಉಪವಿಭಾಗಾ ಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್  ಪಟ್ಟರಾಜಗೌಡ ಮಾತನಾಡಿದರು. ಬಿಆರ್‍ಸಿ ತಿಪ್ಪೇಶಪ್ಪ ಉಪನ್ಯಾಸ ನೀಡಿದರು.

ಚಲುವಾದಿ ಮಹಾಸಭಾ ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ನವೀನ್, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಕುರುವ ಮಂಜುನಾಥ್‌, ಚೆಲುವಾದಿ ಸಮಾಜದ ಮುಖಂಡರಾದ ಕುಂಬಳೂರು ಹಾಲೇಶಪ್ಪ, ಮಾಸಡಿ ನಾಗರಾಜ್, ಮಹೇಶ್ವರಪ್ಪ, ಮಾದೇನಹಳ್ಳಿ ನಾಗರಾಜ್‌, ತಕ್ಕನಹಳ್ಳಿ ರಂಗನಾಥ್‌, ಲಿಂಗಾಪುರ ಲೋಹಿತ್‌, ತಾ.ಪಂ. ಇಓ ರಾಘವೇಂದ್ರ, ಕೃಷಿ ಇಲಾಖೆಯ ಪ್ರತಿಮಾ, ತೋಟಗಾರಿಕೆ ರೇಖಾ, ಗ್ರೇಡ್‌-2 ತಹಶೀಲ್ದಾರ್ ಸುರೇಶ್, ಚಲುವಾದಿ ಸಮಾಜದ ಅನೇಕ ಮುಖಂಡರು ಇದ್ದರು. 

error: Content is protected !!