ಮಲೇಬೆನ್ನೂರು : ಹೈಟೆಕ್ ಶೌಚಾಲಯ ನಿರ್ಮಾಣ ಸ್ಥಳ ಪರಿಶೀಲನೆ

ಮಲೇಬೆನ್ನೂರು : ಹೈಟೆಕ್ ಶೌಚಾಲಯ ನಿರ್ಮಾಣ ಸ್ಥಳ ಪರಿಶೀಲನೆ

ಮಲೇಬೆನ್ನೂರು, ನ. 16- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡುವ ವಿಚಾರದಲ್ಲಿ ಈ ಹಿಂದೆ ಉಂಟಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಬಿ.ಪಿ. ಹರೀಶ್ ಎಸ್‌ಬಿಸಿ ಸಮಿತಿಯವರೊಂದಿಗೆ ಚರ್ಚಿಸಿ, ಸ್ಥಳ ಪರಿಶೀಲಿಸಿದರು.  ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಈ ವೇಳೆ ಶಾಸಕರು ತಿಳಿಸಿದರು.ಕಾಲೇಜ್ ಎಸ್‌ಬಿಸಿ ಕಮಿಟಿ ಉಪಾಧ್ಯಕ್ಷ ಆನಂದ ಚಾರ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಪಿ.ಆರ್. ರಾಜು, ಎ.ಕೆ. ಲೊಕೇಶ್, ಪ್ರೌಢ ಶಾಲೆ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಒ.ಜಿ. ಮಂಜುನಾಥ್ ಹಾಗೂ ಶಿಕ್ಷಕರು ಈ ವೇಳೆ ಹಾಜರಿದ್ದರು. 

error: Content is protected !!