ನಗರದಲ್ಲಿ ಭರ್ಜರಿ ಪಟಾಕಿ ವ್ಯಾಪಾರ

ನಗರದಲ್ಲಿ ಭರ್ಜರಿ ಪಟಾಕಿ ವ್ಯಾಪಾರ

ದಾವಣಗೆರೆ, ನ.15- ಕೊರೊನಾ ಮುಂತಾದ ಕಾರಣಗಳಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದ ಪಟಾಕಿ ವ್ಯಾಪಾರ ಕುಸಿತ ಕಂಡಿತ್ತು. ಆದರೆ ಈ ವರ್ಷ ತೀವ್ರ ಬೆಲೆ ಏರಿಕೆ ನಡುವೆಯೂ ಭರ್ಜರಿ ಪಟಾಕಿ ವ್ಯಾಪಾರ ನಡೆದಿದೆ.

ಮಂಗಳವಾರ ಸಂಜೆ ಹೈಸ್ಕೂಲ್ ಮೈದಾ ನದಲ್ಲಿನ ಬಹುತೇಕ ಮಳಿಗೆಗಳಲ್ಲಿ ಪಟಾಕಿ ಖಾಲಿ ಯಾಗಿದ್ದುದೇ ಪಟಾಕಿ ವಹಿವಾಟು ಉತ್ತಮವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. 

ನಾಲ್ಕು ದಿನಗಳಲ್ಲಿ ಪಟಾಕಿ ವಹಿವಾಟು ಕೋಟ್ಯಾಂತರ ರೂಪಾಯಿಗಳಾಗುತ್ತದೆ. ಆದರೆ ತೆರಿಗೆ ಅಧಿಕಾರಿಗಳ ಭಯದಿಂದ ವ್ಯಾಪಾರಿಗಳು ನಿಖರವಾದ ವಹಿವಾಟು ಮೊತ್ತ ಹೇಳಲು ನಿರಾಕರಿಸುತ್ತಾರೆ. ಅವರ ಪ್ರಕಾರ ನಾಲ್ಕು ದಿನಗಳ ವಹಿವಾಟು ಕೇವಲ 1.50 ರಿಂದ 2 ಕೋಟಿ ರೂಗಳಷ್ಟು ಮಾತ್ರ.

ಶನಿವಾರ ಪಟಾಕಿ ಮಳಿಗೆಗಳಲ್ಲಿ ವಹಿ  ವಾಟು ಆರಂಭವಾಯಿತು. ಭಾನು ವಾರವೇ ಜನರು ಪಟಾಕಿ ಮಳಿಗೆಗಳತ್ತ ಹೆಜ್ಜೆ ಹಾಕಿ ದರು. ಲೈಸನ್ಸ್ ಕೊಡುವುದು ತಡ ವಾಗಿದ್ದ ಕಾರಣ ಉತ್ತಮ ವ್ಯಾಪಾರದ ನಿರೀಕ್ಷೆ ಅಸಾಧ್ಯ  ಎಂದು ಸ್ವತಃ ವ್ಯಾಪಾರಿಗಳು ಹೇಳಿದ್ದರು.

ಆದರೆ ಜನತೆ ಆ ನಿರೀಕ್ಷೆ ಹುಸಿ ಮಾಡಿದ್ದಾರೆ ಎನಿಸಿತು. ಸೋಮವಾರ ಹಾಗೂ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿಯೇ ಜನರು ಮಳಿಗೆಗಳಿಗೆ ಆಗಮಿಸಿ ಪಟಾಕಿ ಖರೀದಿಸುತ್ತಿದ್ದರು. ಮಂಗಳವಾರ ಸಂಜೆ ವೇಳೆಗಾಗಲೇ ಕೆಲ ಮಳಿಗೆಗಳಲ್ಲಿ ಪಟಾಕಿಗಳೇ ಖಾಲಿಯಾಗಿದ್ದವು. ಉಳಿದಿದ್ದ ಪಟಾಕಿಗಳನ್ನು ಹೆಚ್ಚು ಹಣ ನೀಡಿಯೇ ಜನ ಖರೀದಿಸಿದರು.

ಹಸಿರು ಪಟಾಕಿ ಮಾತ್ರ ಬಳಕೆಗೆ ಅವಕಾಶ ನೀಡಿದ್ದರಿಂದ ಪಟಾಕಿ ಬೆಲೆ ದುಪ್ಪಟ್ಟಾಗಿತ್ತು. ಆದಾಗ್ಯೂ ಜನರು ಪಟಾಕಿ ಖರೀದಿಸಿದ್ದಾರೆ. ಭಾನುವಾರದಿಂದ ಮಂಗಳವಾರದವರೆಗೆ ನಗರದಲ್ಲಿ ಪಟಾಕಿ ಸದ್ದು ಮೊಳಗಿದೆ. ಬಲಿಪಾಡ್ಯಮಿಯ ದಿನವಾದ ಮಂಗಳವಾರವಂತೂ ಪಟಾಕಿ ಸದ್ದು ಭರ್ಜರಿಯಾಗಿಯೇ ಇತ್ತು.

ಒಟ್ಟಿನಲ್ಲಿ ಈ ವರ್ಷ ಮಳೆ ಇಲ್ಲದೆ ಬರ ಬಂದಿದೆ. ಹಬ್ಬಗಳ ಸಂಭ್ರಮಕ್ಕೆ ಬರದ ಮಂಕು ಕವಿಯುತ್ತದೆ ಎಂಬೆಲ್ಲಾ ಮಾತುಗಳು ಹುಸಿಯಾಗಿವೆ. ದೀಪಾವಳಿಯನ್ನು ಜನತೆ ಸಂಭ್ರಮದಿಂದಲೇ ಆಚರಿಸಿದ್ದಾರೆ.

ಅಂದ ಹಾಗೆ ಈ ವರ್ಷ ಅರ್ಜಿ ಸಲ್ಲಿಸಿದ್ದ 109 ಮಂದಿ ವರ್ತಕರ ಪೈಕಿ  57 ಜನರಿಗೆ ಮಾತ್ರ ಪಟಾಕಿ ಮಾರಾಟದ ಪರವಾನಿಗೆ ದೊರೆತಿದ್ದು, ವರ್ತಕರು ಪಟಾಕಿ ಮಳಿಗೆಗಳಲ್ಲಿ ಸರ್ಕಾರದ ನಿಬಂಧನೆಯಂತೆ ಅಗ್ನಿನಂದಕ, ನೀರು, ಮರಳಿನ ವ್ಯವಸ್ಥೆ ಮಾಡಿಕೊಂಡಿದ್ದರು.

error: Content is protected !!