ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಶೀಘ್ರ ಬಿಡುಗಡೆಗೆ ಸಂಸದರು ಒತ್ತಡ ತರಲಿ

ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಶೀಘ್ರ ಬಿಡುಗಡೆಗೆ ಸಂಸದರು ಒತ್ತಡ ತರಲಿ

ಜಗಳೂರು, ನ. 15 – ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಿ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತ ನಾಡಿದರು‌. ಬಹುದಿನ ಕನಸಿನ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿ ಕೇಂದ್ರ ಆಡಳಿತ ಸರ್ಕಾರ ಕಳೆದ ಬಜೆಟ್‌ನಲ್ಲಿ ರೂ. 5300 ಕೋಟಿ ಅನುದಾನ ಘೋಷಿಸಿ ಅನುದಾನ ಬಿಡುಗಡೆಯ ಭರವಸೆ ನೀಡಿತ್ತು‌. ಇದರ ಕಡತ ಪ್ರಧಾನಮಂತ್ರಿ ಕಛೇರಿಯಲ್ಲಿದೆ. ಸಚಿವ ಸಂಪುಟದಲ್ಲಿ ಇದುವರೆಗೂ ಚರ್ಚೆಯಾಗಿಲ್ಲ.ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾಗಿದೆ. ಕೆಲವೆಡೆ ಭೂ-ಸ್ವಾಧೀನ ಮಾಡಿಕೊಳ್ಳಬೇಕಿದೆ. ಅಧಿಕೃತವಾಗಿ ಘೋಷಿಸಿದರೆ ಶೀಘ್ರ ಕಾಮಗಾರಿ ಪೂರ್ಣಗೊಳ್ಳುತ್ತದೆ.ಆದರೆ ಸಂಸದರು ಪ್ರಯತ್ನಮಾಡುತ್ತಿಲ್ಲ.

ಯೋಜನೆ ಜಾರಿಯಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿ : 18423 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. 9 ಕೆರೆಗಳು ಭರ್ತಿ ಯಾಗಲಿವೆ. ಕೂಡಲೇ   ಸಂಸದ ಜಿ.ಎಂ. ಸಿದ್ದೇಶ್ವರ, ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಚಿವ  ನಾರಾ ಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸಂಪುಟದಲ್ಲಿ  ಅನುಮೋದನೆ ಗೊಳಿಸಿ ಹಣ ಬಿಡುಗಡೆಗೆ ಒತ್ತಡ ತರಬೇಕಿದೆ.  ಸಂಸದ ಸಿದ್ದೇಶ್ವರ ಅವರು ಜನತೆಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿ  ಜಿಲ್ಲೆಯ ರೈತರಿಗೆ ಅನ್ಯಾಯಮಾಡು ತ್ತಿರುವುದು ಖಂಡನೀಯ ಎಂದು ಟೀಕಿಸಿದರು. 

error: Content is protected !!